Published
4 months agoon
By
Akkare Newsರಾಜ್ಯ ಸರಕಾರದ ಫ್ರೀ ಬಸ್ ಯೋಜನೆಯಿಂದಾಗಿ ಬಸ್ ಗಳಿಗೆ ಈ ಸ್ಥಿತಿ ಬಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು
ಈ ವೈರಲ್ ವಿಡಿಯೋ ಕುರಿತಂತೆ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಅವರು ಪತ್ರಿಕೆಗೆ ಸ್ಪಷ್ಟನೆಗೆ ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ತಪ್ಪುದಾರಿಗೆಳೆಯುವಂತಿದೆ. ಶುಕ್ರವಾರ ಈ ಘಟನೆ ಸಂಭವಿಸಿದ್ದು, 60 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ದೊಡ್ಡ ಹಂಪ್‌ಗೆ ಡಿಕ್ಕಿ ಹೊಡೆದ ಕಾರಣ ಬಸ್ ನ ಪುಟ್ ಬೋರ್ಡ್ ಗೆ ಹಾನಿಯಾಗಿದೆ ಎಂದಿದ್ದಾರೆ.
ಬಸ್ ಅನ್ನು ತಕ್ಷಣವೇ ಸರ್ವಿಸ್ ನಿಂದ ಹಿಂದಕ್ಕೆ ತೆಗೆದುಕೊಳ್ಳಲಾಗಿದ್ದು, ವರ್ಕಶಾಪ್ ಗೆ ಕಳುಹಿಸಿ ರಿಪೇರಿ ಕೆಲಸ ಮಾಡಲಾಗುತ್ತಿದೆ ಎಂದರು. ಪ್ರಯಾಣಿಕರನ್ನು ಸುರಕ್ಷಿತವಾಗಿ ಬೇರೆ ಬಸ್ ಗೆ ವರ್ಗಾಯಿಸಲಾಗಿತ್ತು ಎಂದು ತಿಳಿಸಿದ್ದಾರೆ.