ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಕೆ.ಐ.ಸಿ ಕುಂಬ್ರ ವಲಯ ಸಮಿತಿ ಅಸ್ತಿತ್ವಕ್ಕೆ

Published

on

ಅಧ್ಯಕ್ಷರಾಗಿ ಅಬ್ದುಲ್ ಸಲಾಂ, ಪ್ರ.ಕಾರ್ಯದರ್ಶಿಯಾಗಿ ಸಿದ್ದೀಕ್ ಸುಲ್ತಾನ್, ಕೋಶಾಧಿಕಾರಿಯಾಗಿ ಅಶ್ರಫ್ ಮುಲಾರ್

 

 

ಪುತ್ತೂರು: ಕರ್ನಾಟಕ ಇಸ್ಲಾಮಿಕ್ ಅಕಾಡೆಮಿ (ಕೆಐಸಿ) ಕುಂಬ್ರ ಇದರ ಅಧೀನದಲ್ಲಿ ಕುಂಬ್ರ ಪರಿಸರದ 27 ಜಮಾಅತ್‌ಳನ್ನು ಒಳಗೊಂಡ ಕುಂಬ್ರ ವಲಯ ಸಮಿತಿಯನ್ನು ರಚಿಸಲಾಯಿತು.

ಧಾರ್ಮಿಕ ಸಂಸ್ಥೆಯೊಂದಿಗೆ ಸಂಬಂಧ ಬೆಳೆಸುವುದರಿಂದ ಲಭಿಸುವ ಪ್ರತಿಫಲದ ಕುರಿತು ವಿವರಿಸಿ ಅಬೂಕ್ಕರ್ ಸಿದ್ದೀಕ್ ಜಲಾಲಿ ಕಾರ್ಯಕ್ರಮ ಉದ್ಘಾಟಿಸಿದರು.
ಸಂಸ್ಥೆಯ ಕಾರ್ಯ ವೈಖರಿಯ ಕುರಿತು ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಅನೀಸ್ ಕೌಸರಿ ಪ್ರಸ್ತಾಪಿಸಿದರು. ಸಂಸ್ಥೆಯ ಉಪಪ್ರಾಂಶುಪಾಲರಾದ ರಾಝಿಕ್ ಹುದವಿಯವರು ಸಂಸ್ಥೆ ಕಲಿಸುತ್ತಿರುವ ಪಠ್ಯ ಪದ್ದತಿ ಬಗ್ಗೆ ವಿವರಿಸಿದರು. ನಂತರ ನೂತನ ಕುಂಬ್ರ ವಲಯ ಸಮಿತಿಯನ್ನು ರಚಿಸಲಾಯಿತು.

 

ಕೆಐಸಿ ಕುಂಬ್ರ ವಲಯ ಸಮಿತಿ ಇದರ ಸಲಹೆಗಾರರಾಗಿ ಅಬೂಬಕ್ಕರ್ ಸಿದ್ದೀಕ್ ಜಲಾಲಿ, ಅಬೂಬಕ್ಕರ್ ದಾರಿಮಿ, ಕರೀಂ ದಾರಿಮಿ ಕುಂಬ್ರ, ಇಸ್ಮಾಯಿಲ್ ಪೈಝಿ ಗಟ್ಟಮನೆ, ಮಜೀದ್ ದಾರಿಮಿ, ಮನ್ಸೂರ್ ಅಸ್ಲಮಿ, ಶಂಸುದ್ದೀನ್ ದಾರಿಮಿ, ಮುಹಮ್ಮದ್ ಮುಸ್ಲಿಯಾರ್ ಮುಂಡೋಳೆ, ರಫೀಕ್ ಫೈಝಿ ಮಾಡನ್ನೂರು, ಆದಂ ದಾರಿಮಿ, ಖಾದರ್ ಉಸ್ತಾದ್ ಮಾಡಾವು, ಅಬ್ಬಾಸ್ ದಾರಿಮಿ ಕೆಲಿಂಜ, ಇಸ್ಮಾಯಿಲ್ ಯಮಾನಿ ಮುನೀರ್ ಅಝ್ಹರಿ, ಸ್ವಾದಿಕ್ ಹನೀಫಿ, ಶುಕೂರ್ ದಾರಿಮಿ, ನಝೀರ್ ಅರ್ಶದಿ ಅವರನ್ನು ಆಯ್ಕೆ ಮಾಡಲಾಯಿತು.

ನಿರ್ದೇಶಕರಾಗಿ ಅಬ್ಬಾಸ್ ಎಸ್‌ಎಂ, ಸಾಬು ಹಾಜಿ ಗಟ್ಟಮನೆ, ಸಂತೋಷ್ ಮುಹಮ್ಮದ್ ಹಾಜಿ, ಅಬ್ದುರ್ರಹ್ಮಾನ್ ಹಾಜಿ ಮುಂಡೋಳೆ, ಯೂಸುಫ್ ಹಾಜಿ ಕಟ್ಟತ್ತಾರು ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಬ್ದುಲ್ ಸಲಾಂ ಎಂ.ಎ ಮೇನಾಲ, ಪ್ರ.ಕಾರ್ಯದರ್ಶಿಯಾಗಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ ಹಾಗೂ ಕೋಶಾಧಿಕಾರಿಯಾಗಿ ಅಶ್ರಫ್ ಮುಲಾರ್ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಾಧ್ಯಕ್ಷರುಗಳಾಗಿ ಫಾರೂಕ್ ಸಂಟ್ಯಾರ್, ಇಬ್ರಾಹಿಂ ಹಾಜಿ ತ್ಯಾಗರಾಜೆ, ಅಬೂಬಕ್ಕರ್ ಮುಲಾರ್ ಆಯ್ಕೆಯಾದರು.

 

ಸಂಘಟನಾ ಕಾರ್ಯದರ್ಶಿಗಳಾಗಿ ರಶೀದ್ ತ್ಯಾಗರಾಜೆ, ಮುಸ್ತಫಾ ಕಟ್ಟತ್ತಾರು, ಉಪಾಧ್ಯಕ್ಷರುಗಳಾಗಿ ಶರೀಫ್ ಹಾಜಿ ಪರ್ಪುಂಜ, ರಫೀಕ್ ಡಿಂಬ್ರಿ, ಎಸ್‌ಪಿಟಿ ಮುಹಮ್ಮದ್ ಕೂಟತ್ತಾನ, ಇಸ್ಮಾಯಿಲ್ ಹಾಜಿ ಕೌಡಿಚ್ಚಾರ್, ಅಬ್ದುಲ್ ಹಮೀದ್ ಫ್ಯಾಮಿಲಿ, ರಝಾಕ್ ತಿಂಗಳಾಡಿ, ಇಬ್ರಾಹೀಂ ಹಾಜಿ ಅಜ್ಜಿಕಲ್ಲು, ಅಬ್ದುಲ್ ಹಕೀಂ ಕುಂಬ್ರ ಆಯ್ಕೆಯಾದರು.

 

ಜೊತೆ ಕಾರ್ಯದರ್ಶಿಗಳಾಗಿ ಫವಾಝ್ ಮರಿಕೆ, ಎಸ್.ಪಿ ಬಶೀರ್ ಶೇಖಮಲೆ, ಶರಫುದ್ದೀನ್ ಎಂ.ಎಂ, ಶರೀಫ್ ತ್ಯಾಗರಾಜೆ, ಅಝೀಝ್ ರೆಂಜಲಾಡಿ, ನವಾಝ್ ಪರ್ಪುಂಜ, ಅಬ್ದುಲ್ಲ ಅದ್ದು ಕೌಡಿಚ್ಚಾರ್, ಕರೀಂ ಸುಳ್ಯಪದವು ಆಯ್ಕೆಯಾದರು.
ಮಾಧ್ಯಮ ಮತ್ತು ಸೋಷಿಯಲ್ ಮೀಡಿಯ ಪ್ರಚಾರಕರಾಗಿ ಸಿದ್ದೀಕ್ ಕುಂಬ್ರ, ಯೂಸುಫ್ ರೆಂಜಲಾಡಿ, ನಾಸಿರ್ ಪೆರ್ಲಂಪಾಡಿ, ಲತೀಫ್ ಬೆಟ್ಟಂಪಾಡಿ, ಸಾಬಿತ್ ಕುಂಬ್ರ
ಅನ್ವರ್ ಮಗಿರೆ ಅವರನ್ನು ಆಯ್ಕೆ ಮಾಡಲಾಯಿತು.

 

ಇದಲ್ಲದೆ 27 ಮಹಲ್ಲ್ ಏರಿಯಾಗಳಿಂದ 36 ಕಾರ್ಯಾಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಸಂಸ್ಥೆಯ ವ್ಯವಸ್ಥಾಕರಾದ ಅಬ್ದುಸ್ಸತ್ತಾರ್ ಕೌಸರಿ ಸ್ವಾಗತಿಸಿದರು, ಬಶೀರ್ ಕೌಡಿಚ್ಚಾರ್ ವಂದಿಸಿದರು.

Continue Reading
Click to comment

Leave a Reply

Your email address will not be published. Required fields are marked *

Advertisement