Published
4 months agoon
By
Akkare Newsದೇವತಾ ಸಮಿತಿ ಪುತ್ತೂರು ಇದರ ವತಿಯಿಂದ ಆಚರಿಸಲ್ಪಡುವ ಕಿಲ್ಲೆ ಮೈದಾನದ ಗಣೇಶೋತ್ಸವದ ಬಗೆಗಿನ ಮಾಹಿತಿಯನ್ನು ನೀಡುವ ಸಲುವಾಗಿ ಆಡಳಿತ ಮಂಡಳಿಯು ವೆಬ್ಸೈಟ್ ಅನ್ನು ಲೋಕಾರ್ಪಣೆ ಮಾಡಲು ಉದ್ದೇಶಿಸಿದ್ದು, ಈ ಕಾರ್ಯಕ್ರಮವು ದಿನಾಂಕ 07-09-2024 ರಂದು ಮಧ್ಯಾಹ್ನ 1:00 ಗಂಟೆಗೆ ಸರಿಯಾಗಿ ಪುತ್ತೂರು ಶಾಸಕರಾದ ಶ್ರೀ ಆಶೋಕ್ ಕುಮಾರ್ ರೈ ಯವರು ನೆರವೇರಿಸಲಿದ್ದಾರೆ.
ಈ ವೆಬ್ಸೈಟ್ ನಲ್ಲಿ ಗಣೇಶೋತ್ಸವದ ಬಗ್ಗೆ ಇತಿಹಾಸ, ಪೂಜಾ ಕಾರ್ಯಕ್ರಮಗಳು, ಲೇಖನಗಳು, ಸಂಸ್ಕೃತಿಕ ಕಾರ್ಯಕ್ರಮ, ಹಿಂದಿನ ಪೋಟೋ ಗಳ ಸಂಗ್ರಹಗಳ ಮಾಹಿತಿಗಳನ್ನು ಸರ್ವಜನಿಕರಿಗೆ ನೀಡಲಾಗುವುದು ಎಂದು ದೇವತಾ ಸಮಿತಿಯ ಅಧ್ಯಕ್ಷರಾದ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆಯವರು ತಿಳಿಸಿದ್ದಾರೆ.