Published
4 months agoon
By
Akkare Newsಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಇಬ್ಬರು ಫಲಾನುಭವಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನೆರವಿನ ಚೆಕ್ ವಿತರಣೆ ನಡೆಯಿತು. ಪುತ್ತೂರು ಶಾಸಕ ಅಶೋಕ್ ರೈ ಶಿಫಾರಸ್ಸಿನಂತೆ ಆರ್ಯಾಪು ಗ್ರಾಮದ ಕುಕ್ಕಾಡಿ ಮನೆ ನಿವಾಸಿ ಪ್ರಿಯಾ ಎಂಬವರಿಗೆ ೭೩,೨೪೦ ರೂ ಮತ್ತು ಬಡಗನ್ನೂರು ಗ್ರಾಮದ ಬನಪದವು ನಿವಾಸಿ ಕಮಲ ಎಂಬವರ ೨೦ ಸಾವಿರ ಪರಿಹಾರದ ಚೆಕ್ ವಿತರಣೆ ನಡೆಯಿತು, ಚೆಕ್ ವಿತರಣೆ ಮಾಡಿ ಮಾತನಾಡಿದ ಶಾಸಕ ಅಶೋಕ್ ರೈಅವರು ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸೀಎಂ ಪರಿಹಾರ ನಿಧಿಗೆ ಅನೇಕ ಅರ್ಜಿಗಳು ಬಂದಿದೆ. ಹಂತ ಹಂತವಾಗಿ ಅರ್ಜಿಗಳ ವಿಲೇವಾರಿ ನಡೆಸಲಾಗುತ್ತದೆ. ಬಡವರಿಗೆ ಸರಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಡಲು ಕಠಿಬದ್ದನಾಗಿದ್ದೇನೆ ಎಂದು ಹೇಳಿದರು.