ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಸಾಟಿ ಇಲ್ಲದ BSNL ರೀಚಾರ್ಜ್ ಆಫರ್ ದಿನಕ್ಕೆ 3ಜಿಬಿ ಡಾಟಾ, ತಿಂಗಳಿಗೆ ಕೇವಲ 214 ರೂ!

Published

on

ಬಿಎಸ್​ಎನ್​ಎಲ್ ಸಂಸ್ಥೆ ಈಗ 4ಜಿ ಸರ್ವಿಸ್ ಒದಗಿಸುತ್ತಿದೆ. ಅದರ ರೀಚಾರ್ಜ್ ಪ್ಲಾನ್​ಗಳೆಲ್ಲವೂ ಅಗ್ಗದ ದರದ್ದಾಗಿವೆ. ಅದರ 599 ರೂ ಪ್ಲಾನ್ 84 ದಿನ ವ್ಯಾಲಿಡಿಟಿ ಇದ್ದು, ದಿನಕ್ಕೆ 3ಜಿಬಿ ಡಾಟಾ ಬಳಕೆಗೆ ಅವಕಾಶ ಇದೆ. 2025ರಷ್ಟರಲ್ಲಿ ಅದು 5ಜಿ ನೆಟ್ವರ್ಕ್ ಅಳವಡಿಸುವ ಸಾಧ್ಯತೆ ಇದೆ.

 

ರಿಲಾಯನ್ಸ್ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಸಂಸ್ಥೆಗಳಂತೆ ಬಿಎಸ್ಸೆನ್ನೆಲ್ 5ಜಿ ಸರ್ವಿಸ್ ಕೊಡಲು ಸಾಧ್ಯವಾಗದೇ ಇರಬಹುದು. ಆದರೆ, 3ಜಿ ಮತ್ತು 4ಜಿ ನೆಟ್ವರ್ಕ್ ಅನ್ನು ಬಿಎಸ್ಸೆನ್ನೆಲ್ ಆಫರ್ ಮಾಡುತ್ತಿದೆ. ದೇಶಾದ್ಯಂತ 4ಜಿ ಅಳವಡಿಕೆಗೆ ಇದು ಯೋಜನೆ ಹಾಕಿದೆ. ಜಿಯೋ, ಏರ್ಟೆಲ್, ವಿಐ ಸಂಸ್ಥೆಗಳು ರೀಚಾರ್ಜ್ ದರಗಳನ್ನು ಸಿಕ್ಕಾಪಟ್ಟೆ ಏರಿಸಿವೆ. ಇದೇ ಹೊತ್ತಲ್ಲಿ ಬಿಎಸ್ಸೆನ್ನೆಲ್ ಬಹಳ ಅಗ್ಗದ ಬೆಲೆಗೆ 4ಜಿ ಸರ್ವಿಸ್ ದರ ಆಫರ್ ಮಾಡುತ್ತಿದೆ.

ವರ್ಷಗಳ ಹಿಂದೆ ಪ್ರತಿಸ್ಪರ್ಧಿಗಳ ಪಾಲಾದ ತನ್ನ ಬಳಕೆದಾರರನ್ನು ಮರಳಿ ಗಿಟ್ಟಿಸಲು ಬಿಎಸ್ಸೆನ್ನೆಲ್ ಎಲ್ಲಾ ಪಟ್ಟುಗಳನ್ನು ಹಾಕುತ್ತಿದೆ. ಅದರ ಎಲ್ಲಾ ರೀಚಾರ್ಜ್ ದರಗಳೂ ಪ್ರತಿಸ್ಪರ್ಧಿಗಳಿಗಿಂತ ಬಹಳ ಕಡಿಮೆ ಇದೆ.

 

ದಿನಕ್ಕೆ 3ಜಿಬಿ ಡಾಟಾ ಕೊಡುವ 599 ರೂ ಪ್ಲಾನ್

ದಿನಕ್ಕೆ ಹೆಚ್ಚು ಡಾಟಾ ಅಗತ್ಯ ಇರುವ ಗ್ರಾಹಕರಿಗೆ ಬಿಎಸ್ಸೆನ್ನೆಲ್ ಅಗ್ಗದ ಪ್ಲಾನ್ ಬಿಡುಗಡೆ ಮಾಡಿದೆ. ಅದರ 599 ರೂ ಪ್ಲಾನ್ ಬಹಳ ಲಾಭ ಕೊಡುತ್ತದೆ. ಇದು 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಹೆಚ್ಚೂಕಡಿಮೆ ಮೂರು ತಿಂಗಳು ಇದನ್ನು ಬಳಸಬಹುದು. 84 ದಿನಗಳ ಕಾಲ ಪ್ರತೀ ದಿನ 3 ಜಿಬಿ ಡಾಟಾ ಪಡೆಯಬಹುದು. ಒಟ್ಟಾರೆ 252 ಜಿಬಿ ಡಾಟಾ ಬಳಸುವ ಅವಕಾಶ ಇರುತ್ತದೆ.

84 ದಿನಕ್ಕೆ 599 ರೂ ಎಂದರೆ ಒಂದು ತಿಂಗಳಿಗೆ 214 ರೂ ಬೆಲೆ ಆಗುತ್ತದೆ. ಈ ಪ್ಲಾನ್​ನಲ್ಲಿ ನೀವು ದಿನಕ್ಕೆ 100 ಎಸ್ಸೆಮ್ಮೆಸ್​​ಗಳನ್ನು ಉಚಿತವಾಗಿ ಕಳುಹಿಸಬಹುದು. ಈ 599 ರೂ ರೀಚಾರ್ಜ್ ಪ್ಲಾನ್ ವಿವರವನ್ನು ಬಿಎಸ್ಸೆನ್ನೆಲ್ ತನ್ನ ಸೋಷಿಯಲ್ ಮೀಡಿಯಾ ಪೋಸ್ಟ್​ನಲ್ಲಿ ತಿಳಿಸಿದೆ.

5ಜಿ ಸರ್ವಿಸ್ ಕೊಡಲು ಬಿಎಸ್ಸೆನ್ನೆಲ್ ಸಜ್ಜು

ಒಂದು ಕಾಲದಲ್ಲಿ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿದ್ದ ಸರ್ಕಾರಿ ಸ್ವಾಮ್ಯದ ಬಿಎಸ್ಸೆನ್ನೆಲ್ ತನ್ನ ಅಸ್ತಿತ್ವ ಕಳೆದುಕೊಂಡಿತು ಎಂದೇ ಭಾವಿಸಿದ್ದರು. ಇತ್ತೀಚೆಗೆ ಅದು ಫೀನಿಕ್ಸ್​ನಂತೆ ಮೇಲೇರಲು ಯತ್ನಿಸುತ್ತಿದೆ. 3ಜಿ ಮತ್ತು 4ಜಿ ಸರ್ವಿಸ್ ಕೊಡಲು ಆರಂಭಿಸಿದೆ. ಬಹಳಷ್ಟು ಗ್ರಾಹಕರು ಬಿಎಸ್ಸೆನ್ನೆಲ್ ಕಡೆ ವಲಸೆ ಹೋಗಿದ್ದಾರೆ.

 

 

ಇದೇ ಹೊತ್ತಲ್ಲಿ 2025ರಷ್ಟರಲ್ಲಿ ಬಿಎಸ್ಸೆನ್ನೆಲ್ 5ಜಿ ಸರ್ವಿಸ್ ಆಫರ್ ಮಾಡುವ ನಿರೀಕ್ಷೆ ಇದೆ. ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ನಿರ್ಮಿಸಲು ಯೋಜನೆ ಹಾಕಿದೆ. ಸರ್ಕಾರದಿಂದಲೂ ಅನುದಾನ ಬಿಡುಗಡೆ ಆಗುತ್ತಿದೆ. ಬಿಎಸ್ಸೆನ್ನೆಲ್​ಗೆ 4ಜಿ ನೆಟ್ವರ್ಕ್ ಅಳವಡಿಕೆ ಮಾಡಿದ್ದ ಟಿಸಿಎಸ್​ನಿಂದಲೇ 5ಜಿ ನೆಟ್ವರ್ಕ್ ಸಿದ್ಧಗೊಳ್ಳಲಿದೆ. 4ಜಿ ನೆಟ್ವರ್ಕ್ ಅಳವಡಿಸುವಾಗಲೇ 5ಜಿಗೆ ಪರಿವರ್ತನೆಯಾಗುವ ರೀತಿಯಲ್ಲಿ ನಿರ್ಮಿಸಲಾಗಿತ್ತು. ಹೀಗಾಗಿ, 5ಜಿ ಅಳವಡಿಕೆಗೆ ಬಿಎಸ್ಸೆನ್ನೆಲ್​ಗೆ ಹೆಚ್ಚಿನ ವೆಚ್ಚ ಮಾಡುವ ಅವಶ್ಯಕತೆ ಇರುವುದಿಲ್ಲ ಎನ್ನಲಾಗಿದೆ.

 

 

Continue Reading
Click to comment

Leave a Reply

Your email address will not be published. Required fields are marked *

Advertisement