ನೆಲ್ಯಾಡಿ ಭಾಗದಲ್ಲಿ ಬಿರುಗಾಳಿಗೆ ತತ್ತರಿಸಿದ ಜನರು: ನಾಲ್ಕು ಮನೆಗಳಿಗೆ ಹಾನಿ ಜನತಾ ಕಾಲೋನಿಯ ನಿವಾಸಿಗಳಾದ ಐತಪ್ಪ, ಬಾಬು ಆಚಾರಿ, ಲೋಕೇಶ್, ಇಸುಬು ಎಂಬುವರ ಮನೆಯ ಮೇಲ್ಚಾವಣಿಯ ಶೀಟ್ ಗಳು ಹಾರಿ ಹಾನಿಗೊಂಡಿದೆ ಹಾಗೂ ಸಮೀಪದಲ್ಲಿ ಎರಡು ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಇದರಿಂದ ಅಪಾರ ನಷ್ಟ ಉಂಟಾಗಿದೆ.
ಸ್ಥಳಕ್ಕೆ ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಲಾಂ ಬಿಲಾಲ್, ಸದಸ್ಯ ಅಬ್ದುಲ್ ಜಬ್ಬಾರ್ ಹಾಗೂ ಕಂದಾಯ ಇಲಾಖೆಯವರು ಭೇಟಿ ನೀಡಿದ್ದಾರೆ.