Published
3 months agoon
By
Akkare Newsಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ, ಶಾಖೆ ಶಿಕ್ಷಣ ಇಲಾಖೆ ಪುತ್ತೂರು,ಇದರ ಆಶ್ರಯದಲ್ಲಿ ಸರಕಾರಿ ಪ್ರೌಢಶಾಲೆ ಶಾಂತಿನಗರ,ಕೋಡಿಂಬಾಡಿ ಯಲ್ಲಿ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಕಬ್ಬಡಿ ಪಂದ್ಯಾಟ ಸಮಯ ಪೂರ್ವಹ್ನ ಗಂಟೆ 9ರಿಂದ ಶಾಂತಿನಗರ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ, ಕಾರ್ಯಕ್ರಮ ದ ಉದ್ಘಾಟನೆ ಯನ್ನು ಜನಪ್ರಿಯ ಶಾಸಕರಾದ ಅಶೋಕ್ ಕುಮಾರ್ ರೈ ಮಾಡಲಿದ್ದಾರೆ,
ಅಧ್ಯಕ್ಷತೆ ಯನ್ನು ಕೋಡಿಂಬಾಡಿ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ ರವರು ವಹಿಸಲಿದ್ದಾರೆ ಎಂದು ಶಾಲಾ ದೈಹಿಕ ಶಿಕ್ಷಕಿ ನಿರ್ಮಲ ರೋಡ್ರಿಗಸ್ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರಾದ ಪ್ರಕಾಶ್ ತಿಳಿಸಿರುತ್ತಾರೆ. ಈ ಪಂದ್ಯಾಟದ ನೇರ ಪ್ರಸಾರ ವನ್ನು ಅಕ್ಕರೆ ನ್ಯೂಸ್ ಮಾಡಲಿದೆ.