Published
3 months agoon
By
Akkare Newsಉಪ್ಪಿನಂಗಡಿ: ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಕಾಡಿಗೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.
ನೆಲ್ಯಾಡಿಯ ಕಾಲೇಜೊಂದರ ವಿದ್ಯಾರ್ಥಿನಿಯನ್ನು ಜೂ.14 ರಂದು ಪುತ್ತೂರಿನಲ್ಲಿ ಪರಿಚಯಿಸಿಕೊಂಡ ಆರೋಪಿ ಪಿಕಪ್ ವಾಹನದಲ್ಲಿ ಮೊಟ್ಟೆ ಸಾಗಾಟ ಮಾಡುವ(ಸುವರ್ಣ ಎಗ್ ಲೈನ್ಸ್) ವಿಟ್ಲ ಕಸಬ ಗ್ರಾಮದ ಜೋಗಿಮಠ ನಿವಾಸಿ ವಿವಾಹಿತನಾಗಿರುವ ಸತೀಶ್ ಸುವರ್ಣ (38) ಎಂಬಾತ ದೂರವಾಣಿ ಮೂಲಕ ಸಂಪರ್ಕಿಸಿ ಆತ್ಮೀಯತೆ ಬೆಳೆಸಿದ್ದ. ಜು.21ರಂದು ಆಕೆಯನ್ನು ನೆಲ್ಯಾಡಿಗೆ ಕರೆಸಿಕೊಂಡು ಪಿಕಪ್ ವಾಹನದಲ್ಲಿ ಬಜತ್ತೂರು ಗ್ರಾಮದ ಕಾಂಚನ ಎಂಬಲ್ಲಿನ ಕಾಡಿಗೆ ಕರೆದೊಯ್ತು ಅತ್ಯಾಚಾರವೆಸಗಿರುತ್ತಾನೆ ಹಾಗೂ ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡಲಾಗುವುದು ಎಂದು ಬೆದರಿಕೆ ಒಡ್ಡಿರುತ್ತಾನೆಂದು ಯುವತಿ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿರುತ್ತಾಳೆ.
ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ :64(1),351 (2) BNS-2023 ಕಲಂ4 ಪೋಕೋ ಕಾಯ್ದೆ- 2012 ರಂತೆ ಅಪರಾಧ ಸಂಖ್ಯೆ: 104/2024 ದಾಖಲಿಸಿಕೊಂಡು,ಸೆ.12 ರಂದು ವಿಟ್ಲ ಕಸಬ ಗ್ರಾಮದ ಜೋಗಿಮಠ ನಿವಾಸಿ ಆರೋಪಿ ಸತೀಶ್ ಸುವರ್ಣ(38) ನನ್ನು ಬಂಧಿಸಿದ್ದಾರೆ.