Published
3 months agoon
By
Akkare Newsಒಂದು ಊರಿನ ಅಭಿವೃದ್ಧಿಯಲ್ಲಿ ಅ ಊರಿನ ಜನರ ಕೆಲಸ ಕಾರ್ಯಗಳು ಸಹ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ.
ಇದಕ್ಕೆ ಪೂರಕ ಎಂಬಂತೆ ಕಡಬ ತಾಲೂಕು ಬೆಳಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಣಿಯೂರು,ಮಾದೋಡಿ, ಪೆರುವಾಜೆ, ಬೆಳ್ಳಾರೆ ಸಂಪರ್ಕ ರಸ್ತೆಯಲ್ಲಿ , ಪ್ರಗತಿ ಶಾಲೆಯ ಬಳಿ ಸೇತುವೆ ಕೆಳಗಡೆ ಒಂದು ಕಡೆ ಹೊಳೆಯ ಬದಿ ಕುಸಿತವಾಗಿ ಅದರ ಭಯ, ಇನ್ನೊಂದು ಬದಿಯಲ್ಲಿ ಪೊದರು, ಗಿಡಗಳು ತುಂಬಿ ಒಂದು ಕಡೆಯಿಂದ ಬರುವ ವಾಹನಗಳು ಇನ್ನೊಂದು ಕಡೆಗೆ ಕಾಣಿಸದೆ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿ ವಾಹನ ಸಂಚಾರ, ಪಾದಚಾರಿಗಳಿಗೆ ತೊಂದರೆ ಮತ್ತು ಅಪಘಾತಗಳು ಸಂಭವಿಸುತ್ತಿದ್ದವು. ಅದುದರಿಂದ ಅ ಪೊದೆಗಳು, ಗಿಡಗಳ ತೆರವು ಕಾರ್ಯಾಚರಣೆ ಮತ್ತು ಕೊಡಿಮಾರು, ಮಿಪಾಲು ಎಂಬಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದ ಪೊದರು, ಗಿಡಗಳ ತೆರವು ಮತ್ತು ರಸ್ತೆಯ ಬದಿಯಲ್ಲಿ ಇದ್ದ ಮರದ ತುಂಡುಗಳನ್ನು ಬದಿಗೆ ಸರಿಸಿ ವಾಹನಗಳು ಸರಾಗವಾಗಿ ಹೋಗಲು ಅನುಕೂಲವಾಗುವಂತೆ ಮಾಡಲಾಯಿತು.
ಈ ಎಲ್ಲ ಕಾರ್ಯಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿದ ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಂತ ಅಬೀರ, ದಿನೇಶ್ ಕಾನಾವು, ತೇಜಸ್ ಕಾನಾವು, ಅಶೋಕ್ ಬಳ್ಪ (ರೈಲ್ವೇ ) ಇವರುಗಳ ಕಾರ್ಯ ನಿಜಕ್ಕೂ ಶ್ಲಾಘನೀಯ.