Published
3 months agoon
By
Akkare Newsಪುತ್ತೂರು: ದ.ಕ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಮತ್ತು ಈದ್ ಮಿಲಾದ್ ಸಮಿತಿ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ 32ನೇ ವರ್ಷದ ಬೃಹತ್ ಮಿಲಾದ್ ಸಮಾವೇಶದ ಪ್ರಯುಕ್ತ ದರ್ಬೆ ಬೈಪಾಸ್ ಬಳಿಯಿಂದ ಕಿಲ್ಲೆ ಮೈದಾನದ ವರೆಗೆ ಆಕರ್ಷಕ ಕಾಲ್ನಡಿಗೆ ಜಾಥಾ ಸೆ.16ರಂದು ಸಂಜೆ ನಡೆಯಿತು.
ಸಾವಿರಾರು ಮಂದಿ ಭಾಗವಹಿಸಿದ್ದರು. ಜಾಥಾ ನಡೆಯುತ್ತಿದ್ದ ವೇಳೆ ಆಗಮಿಸಿದ ಶಾಸಕ ಅಶೋಕ್ ಕುಮಾರ್ ರೈಯವರು ತುಸುದೂರ ಜಾಥಾದಲ್ಲಿ ಹೆಜ್ಜೆ ಹಾಕಿದರಲ್ಲದೇ ಬಳಿಕ ಪುತ್ತೂರು ಗಾಂಧಿಕಟ್ಟೆ ಬಳಿ ಹಾಗೂ ಕಲ್ಲಾರೆಯಲ್ಲಿ ಸೇರಿದ್ದವರಿಗೆ ಸಿಹಿ ಹಂಚಿದರು. ಶಾಸಕರ ಈ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.