Published
3 months agoon
By
Akkare News
ಪುತ್ತೂರು: ಪುತ್ತೂರು ಬೈಪಾಸ್ ರಸ್ತೆ ಎಮ್.ಆರ್.ಪಿ.ಎಲ್ ಪೆಟ್ರೋಲ್ ಪಂಪ್ ಬಳಿ ಸೆ.16ರಂದು ಮಧ್ಯಾಹ್ನ ಪಿಕಪ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ತೀವ್ರ ಗಾಯಗೊಂಡಿದ್ದಾರೆ.
ಬೈಕ್ ಸವಾರ ಪುತ್ತೂರು ಸಚಿನ್ ಟ್ರೇಡಿಂಗ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಕಡಬ ತಾಲೂಕಿನ ಕುದ್ಮಾರು ನಿವಾಸಿ ಪ್ರಮೋದ್ ಕೆ.ಎಸ್(23ವ) ಎಂಬವರು ಗಾಯಾಳು. ಅವರು ಬೈಕ್ ಚಲಾಯಿಸಿಕೊಂಡು ಬೊಳುವಾರಿನಿಂದ ಸಚಿನ್ ಟ್ರೇಡಿಂಗ್ ಸಂಸ್ಥೆಗೆ ಹೋಗುತ್ತಿದ್ದ ವೇಳೆ ಮೈಸೂರು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಐಸ್‌ಕ್ರೀಮ್ ಸಾಗಾಟದ ಪಿಕಪ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಪ್ರಮೋದ್ ಕೆ.ಎಸ್ ಅವರ ಭುಜ, ಎದೆಗೆ ತೀವ್ರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.