Published
3 months agoon
By
Akkare Newsಪುತ್ತೂರು: ಪುರುಷರಕಟ್ಟೆ ದಾಬೋಲಿ ಶ್ರೀ ಗುರುಪೂರ್ಣಮಂದಿರದ ಎಂಬಲ್ಲಿ ಕಾರು ಮತ್ತು ಸ್ಕೂಟರ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರ ಹೋಳಿಗೆ ವ್ಯಾಪಾರಿ ತೀವ್ರ ಗಾಯವಾದ ಘಟನೆ ಸೆ.21ರಂದು ನಡೆದಿದೆ.
ಬಂಟ್ವಾಳ ತಾಲೂಕಿನ ಪಂಜಳ ನಿವಾಸಿ ಹೋಳಿಗೆ ವ್ಯಾಪಾರಿ ಗಣೇಶ್ ಪ್ರಭು ಗಾಯಾಳು. ಅವರು ಪುತ್ತೂರು ಪುರುಷರಕಟ್ಟೆಯಲ್ಲಿನ ಉದಯಭಾಗ್ಯ ಹೊಟೇಲ್‌ನಲ್ಲಿ ಹಿಂದೆ ಕೆಲಸ ನಿರ್ವಹಿಸುತ್ತಿದ್ದು ಬಳಿಕ ಹೋಳಿಗೆ ವ್ಯಾಪಾರ ನಡೆಸುತ್ತಿದ್ದರು.
ಸೆ.21 ರಂದು ಹೋಳಿಗೆ ಕೊಂಡೊಯ್ಯಲೆಂದು ಉದಯಭಾಗ್ಯ ಹೊಟೇಲ್‌ಗೆ ಸ್ಕೂಟರ್ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಪುರುಷರಕಟ್ಟೆ ದಾಮೋಲಿ ಶ್ರೀ ಗುರುಪೂರ್ಣಮಂದಿರ ಬಳಿ ವಿರುದ್ಧ ಧಿಕ್ಕಿನಿಂದ ಬರುತ್ತಿದ್ದ ಕಾರು ನಡುವೆ ಅಪಘಾತ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಗಣೇಶ್ ಪ್ರಭು ಅವರು ತೀವ್ರ ಗಾಂಯಗೊಂಡಿದ್ದು. ಅವರನ್ನು ಮಂಗಳೂರು ಕೆ.ಎಂ.ಸಿ ಅಸ್ಪತ್ರೆಗೆ ಕರೆದೊಯ್ಯಲಾಗಿದೆ ,ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
‘