Published
3 months agoon
By
Akkare Newsಬೆಳ್ತಂಗಡಿ : ಸುಮಾರು 8 ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಅಕ್ರ 172/2014 ಕಲಂ 354(b) 323,324,504,506 ಐಪಿಸಿ ಪ್ರಕರಣದ ಆರೋಪಿ ಚೆಟ್ಟರಿಕಲ್ ಮನೆ, ಹೊಸದುರ್ಗ ತಾಲೂಕು, ಕಾಸರಗೋಡು, ಕೇರಳ ನಿವಾಸಿ ಡೆನ್ನಿ ಜೋಸೆಫ್ @ ಅಂತೋನಿ ಎಂಬಾತನನ್ನು, ಬೆಳ್ತಂಗಡಿ ಪೊಲೀಸ್ ಠಾಣಾ ನಿರೀಕ್ಷಕರು ಬಿ ಜಿ ಸುಬ್ಬಾಪುರ ಮಠ, ಉಪ ನೀರಿಕ್ಷಕರು ಮುರಳೀಧರ್ ರವರ ನಿರ್ದೇಶನದಂತೆ, ಠಾಣಾ ಹೆಚ್ ಸಿ 418 ವ್ರಷಭ, ಹೆ ಚ್ ಸಿ 2173 ಪಳನಿವೇಲು ಮತ್ತು ಪಿಸಿ 2398 ಮುನಿಯ ನಾಯ್ಕ ರವರುಗಳು ದಿನಾಂಕ 21/09/2024 ರಂದು ಬೆಳ್ತಂಗಡಿ ತಾಲೂಕು, ಉಜಿರೆ ಎಂಬಲ್ಲಿ ದಸ್ತಗಿರಿ ಮಾಡಿ, ಮಾನ್ಯ ನ್ಯಾಯಾಲಯ ಮುಂದೆ ಹಾಜರಪಡಿಸಿರುತ್ತಾರೆ. ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
‘