Published
3 months agoon
By
Akkare Newsಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಎ.15 ಕಾರ್ತಿಕ್, ಎ.16 ಕೇಶವಮೂರ್ತಿ, ಎ17 ನಿಖಿಲ್ ಇವರಿಗೆ ಷರತ್ತು ಬದ್ಧ ಜಾಮೀನು ದೊರಕಿದೆ. ಪೊಲೀಸ್ ಠಾಣೆಗೆ ಶರಣಾಗಲು ಹೋದ ಇವರಿಗೆ ಇದೀಗ ಜಾಮೀನು ದೊರಕಿದೆ.
ಹೈಕೋರ್ಟ್‌ನಿಂದ ಕೇಶವ ಮೂರ್ತಿಗೆ ಜಾಮೀನು ಮಂಜೂರಾಗಿದ್ದು, ಸಾಕ್ಷಿಗಳ ಮೇಲೆ ಪ್ರಭಾವ ಬೀರದಂತೆ, ಒಬ್ಬರ ವೈಯಕ್ತಿಕ ಶ್ಯೂರಿಟಿ ನೀಡುವಂತೆ ಕೋರ್ಟ್ ಹೇಳಿದೆ.
ಈ ಪ್ರಕರಣದ ಎ15 ಕಾರ್ತಿಕ್, ಎ17 ನಿಖಿಲ್ ಗೆ 57 ನೇ ಸೆಷನ್ಸ್ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಈ ಪ್ರಕರಣದಲ್ಲಿ ಬಂಧನದಲ್ಲಿರುವ ನಟ ದರ್ಶನ್ ಮತ್ತು ಪವಿತ್ರಾ ಗೌಡ ಅವರಿಗೆ ಜಾಮೀನು ದೊರಕಿಲ್ಲ. ದರ್ಶನ್ ಜಾಮೀನು ಅರ್ಜಿ ವಿಚಾರಣೆಯನ್ನು ಸೆ.27 ಕ್ಕೆ, ಪವಿತ್ರಾ ಗೌಡ ಜಾಮೀನು ಅರ್ಜಿಯನ್ನು ಸೆ.25ಕ್ಕೆ ಮುಂದೂಡಿಕೆ ಮಾಡಲಾಗಿದೆ.
.