Published
3 months agoon
By
Akkare Newsಪುತ್ತೂರು: ಎರಡು ಬೈಕ್ ಗಳ ಮಧ್ಯೆ ಡಿಕ್ಕಿ ಸಂಭವಿಸಿ ಸವಾರರಿಬ್ಬರು ಗಾಯಗೊಂಡಿರುವ ಘಟನೆ ಪುತ್ತೂರು- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಸರ್ವೆಯಲ್ಲಿ ಸೆ.26ರಂದು ನಡೆದಿದೆ.
ಸವಣೂರು ಕಡೆಯಿಂದ ಪುತ್ತೂರು ಕಡೆಗೆ ಸೋಂಪಾಡಿ ನಿವಾಸಿ ವರುಣ್ ಎಂಬುವರು ಚಲಾಯಿಸುತ್ತಿದ್ದ ಬೈಕ್ ಮತ್ತು ವಿರುದ್ಧ ದಿಕ್ಕಿನಿಂದ ಸರ್ವೆ ದೋಳಗೊತ್ತು ನಿವಾಸಿ ಶಶಿಧರ್ ಎಸ್.ಡಿ ಎಂಬವರು ಚಲಾಯಿಸಿದ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿದೆ.
ಘಟನೆಯಿಂದ ಬೈಕ್ ಸವಾರಿಬ್ಬರಿಗೂ ಗಾಯವಾಗಿದ್ದು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೈಕ್ ಗಳಿಗೂ ಹಾನಿ ಉಂಟಾಗಿದೆ. ಅಪಘಾತ ಸಂಭವಿಸಿದ ವೇಳೆ ಸ್ಥಳೀಯ ರಿಕ್ಷಾ ಚಾಲಕರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾಗಿದ್ದಾರೆ ಎಂದು ತಿಳಿದು ಬಂದಿದೆ.
ಸರ್ವೆ ರಿಕ್ಷಾ ಸ್ಟ್ಯಾಂಡ್ ಬಳಿಯಲ್ಲಿ ಸೊರಕೆಗೆ ತಿರುವು ರಸ್ತೆ ಇದ್ದು ಮೂರು ರಸ್ತೆ ಸಂಧಿಸುವ ಈ ಜಾಗದಲ್ಲಿ ಹಲವು ಅಪಘಾತಗಳು ನಡೆಯುತ್ತಲೇ ಇದೆ. ವಿರುದ್ಧ ದಿಕ್ಕಿನಿಂದ ಬರುವ ವಾಹನಗಳು ತಕ್ಷಣಕ್ಕೆ ಗೋಚರಿಸದೆ ಇರುವುದು ಅಪಘಾತಕ್ಕೆ ಕಾರಣವಾಗುತ್ತಿದೆ, ಇಲ್ಲಿನ ಸಮಸ್ಯೆಗೆ ಸಂಬಂಧಪಟ್ಟವರು ಗಮನಹರಿಸಬೇಕೆಂದು ಸ್ಥಳಿಯರು ಆಗ್ರಹಿಸಿದ್ದಾರೆ.