Published
3 months agoon
By
Akkare Newsಮೈಸೂರು : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನೀಡಿದ್ದ 14 ನಿವೇಶನಗಳ ಕ್ರಯಪತ್ರ ರದ್ದುಗೊಳಿಸಲಾಗಿದೆ.
ಈ ಸಂಬಂಧ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಮುಡಾ ಆಯುಕ್ತ ರಘುನಂದನ್, ʼಯಾರೇ ನಿವೇಶನ ವಾಪಸ್ ನೀಡಿದರೂ ಹಿಂಪಡೆಯುತ್ತೇವೆ. ಪಾರ್ವತಿಯವರು 14 ನಿವೇಶನಗಳನ್ನು ಹಿಂತಿರುಗಿಸಿದ್ದಾರೆ. ಹಾಗಾಗಿ ವಿಜಯನಗರದಲ್ಲಿನ 14 ನಿವೇಶನಗಳ ಕ್ರಯ ಪತ್ರವನ್ನು ರದ್ದುಗೊಳಿಸಲಾಗಿದೆ. ಈ 14 ನಿವೇಶನಗಳ ಕ್ರಯ ಪತ್ರ ರದ್ದುಗೊಳಿಸಿರುವುದನ್ನು ಸರಕಾರದ ಗಮನಕ್ಕೂ ತರಲಾಗಿದೆʼ ಎಂದು ಮಾಹಿತಿ ನೀಡಿದರು.
ಮುಡಾ ಕಾರ್ಯದರ್ಶಿ ಪ್ರಸನ್ನ ಕುಮಾರ್ ಮಾತನಾಡಿ, ʼಮುಡಾದಿಂದ ನಿವೇಶನ ಪಡೆದ ಯಾರೇ ಬಂದು ನಿವೇಶನ ವಾಪಸ್ ನೀಡುತ್ತೇವೆ ಎಂದರೆ ಅವುಗಳನ್ನು ವಾಪಸ್ ಪಡೆಯುತ್ತೇವೆʼ ಎಂದು ಹೇಳಿದರು.