ನಮ್ಮೊಂದಿಗೆ ಸಂಪರ್ಕ ಸಾಧಿಸಿ

ರಾಜಕೀಯ

ಬ್ಲಾಕ್ ಕಾಂಗ್ರೆಸ್‌ನಿಂದ ಗಾಂಧಿ ನಮನ, ಪಾದಾಯಾತ್ರೆ

Published

on

ಪುತ್ತೂರು:ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಅಂಗವಾಗಿ ಅ.2ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್‌ನ ವತಿಯಿಂದ ಗಾಂಧಿ ನಮನ ಮತ್ತು ಪಾದಾಯಾತ್ರೆಯನ್ನು ನಡೆಸಿದರು.
ಬಸ್‌ನಿಲ್ದಾಣದ ಬಳಿಯ ಗಾಂಧೀಕಟ್ಟೆಯಲ್ಲಿ ಮಹಾತ್ಮ ಗಾಂಧೀಜಿಯವರ ಪ್ರತಿಮೆಗೆ ಹಾರಾರ್ಪಣೆ ಮಾಡಿ ನಮಿಸಿದ ಬಳಿಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈಯವರು ಪಾದಾಯಾತ್ರೆಗೆ ಚಾಲನೆ ನೀಡಿದರು.


ಗಾಂಧೀಕಟ್ಟೆಯ ಬಳಿಯಿಂದ ಹೊರಟ ಪಾದಾಯಾತ್ರೆಯು ಎಪಿಎಂಸಿ ರಸ್ತೆಯಲ್ಲಿರುವ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಚೇರಿ ತನಕ ಸಾಗಿ ಅಲ್ಲಿ ಸಮಾಪನಗೊಂಡಿತು. ಬಳಿಕ ಪಕ್ಷದ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ರವರ ಜೊತೆಗೆ ಝೂಮ್ ಮೀಟ್‌ನಲ್ಲಿ ಭಾಗವಹಿಸಿದರು. ಝೂಮ್ ಮೀಟ್‌ನಲ್ಲಿ ವೀಕ್ಷಣೆಗೆ ಎಲ್‌ಇಡಿ ಪರದೆಯನ್ನು ಅಳವಡಿಸಲಾಗಿತ್ತು.

 

 

 

 

ಬ್ಲಾಕ್ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಕೃಷ್ಣಪ್ರಸಾದ್‌ ಆಳ್ವ, ಪುರಸಭಾ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಕಾಂಗ್ರೆಸ್ ರಾಜ್ಯ ವಕ್ತಾರ ಅಮಳ ರಾಮಚಂದ್ರ, ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿ’ ಸೋಜ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್‌ ಕೌಶಲ್ ಶೆಟ್ಟಿ, ಅಕ್ರಮ-ಸಕ್ರಮ ಸಮಿತಿ ಸದಸ್ಯೆ ರೂಪರೇಖಾ ಆಳ್ವ, ರಾಮಣ್ಣ ಪಿಳಿಂಜ, ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ವೇದನಾಥ ಸುವರ್ಣ, ಸೀತಾರಾಮ ಶೆಟ್ಟಿ ಬನ್ನೂರು, ಮಹೇಶ್‌ಚಂದ್ರ ಸಾಲ್ಯಾನ್, ಸಯ್ಯದ್ ಕಮಲ್, ಸಂತೋಷ್‌ ಭಂಡಾರಿ ಚಿಲ್ಕೆತ್ತಾರು, ಶರೂನ್ ಸಿಕ್ಕೇರಾ, ವಿಶ್ವಜಿತ್‌ ಅಮ್ಮಂಜ, ರವಿಪ್ರಸಾದ್ ಶೆಟ್ಟಿ, ಲ್ಯಾನ್ಸಿ ಮಸ್ಕರೇನಸ್, ಮೌರೀಸ್ ಮಸ್ಕರೇನಸ್, ಐತ್ತಪ್ಪ ಪೇರಡ್ಕ, ಅನಂತಕೃಷ್ಣ, ವಿಜಯಲಕ್ಷ್ಮಿ, ಅಸ್ಮಾಗಟ್ಟಮನೆ ಸೇರಿದಂತೆ ಹಲವು ಮಂದಿ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement