Published
3 months agoon
By
Akkare Newsಪುತ್ತೂರು: ಗಾಂಧೀಜಿಯವರ ಜಯಂತಿ ಆಚರಿಸಿ, ಮಾಲಾರ್ಪಣೆ ಮಾಡಿ, ಅವರ ಬಗ್ಗೆ ಮಾತನಾಡಿದರೆ ಮಾತ್ರಕ್ಕೆ ಹೆಚ್ಚು ಮಹತ್ವವಲ್ಲ. ಅವರ ಆಚಾರ-ವಿಚಾರ, ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕಾಗಿ, ದೇಶಕ್ಕಾಗಿ ಕೆಲಸ ಮಾಡಿದಾಗ ಗಾಂಧಿ ಜಯಂತಿಗೆ ಆಚರಣೆಗೆ ಅರ್ಥ ಬರುತ್ತದೆ ಎಂದು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಹೇಳಿದರು.
ಗಾಂಧೀಕಟ್ಟೆ ಸಮಿತಿ ಹಾಗೂ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಅ.೨ರಂದು ಬಸ್ ನಿಲ್ದಾಣದ ಬಳಿಯ ಗಾಂಧೀಕಟ್ಟೆಯಲ್ಲಿ ನಡೆದ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಗಾಂಧೀ ಪ್ರತಿಮೆಗೆ ಹಾರಾರ್ಪಣೆ ಮಾಡಿ ಮಾತನಾಡಿದರು.
ವಕೀಲರಾಗಿ, ಪ್ರಕೃತಿ ಸಂರಕ್ಷಕರಾಗಿ ಸ್ವಾತಂತ್ರ್ಯ ಹೋರಾಟಗಾರರಾಗಿ, ರಾಜಕಾರಣಿಯಾಗಿ, ಸಾಮಾಜಿಕ ಸುಧಾಕರರಾಗಿದ್ದು ಮಹಾತ್ಮ ಗಾಂಧೀಜಿಯವರು ಒಂದೇ ವ್ಯಕ್ತಿ ಹಲವು ವ್ಯಕ್ತಿತ್ವಗಳನ್ನು ಹೊಂದಿದ್ದವರು. ಅವರು ಮುಟ್ಟದ ಕ್ಷೇತ್ರಗಳಿಲ್ಲ. ಎಲ್ಲರಲ್ಲಿಯೂ ಸಮಾನತೆಯನ್ನು ಕಂಡಿರುವ ಅವರು ವಿವಿಧ ರಾಜವಂಶಗಳ ಮೂಲಕ ಹಂಚಿ ಹೋಗಿದ್ದ ಭಾರತದಲ್ಲಿ ನಾವು ಭಾರತೀಯರು ಎಂಬ ಭಾವನೆಯನ್ನು ಮೂಡಿಸಿದವರು ಎಂದರು.