Published
3 months agoon
By
Akkare Newsಕೋಡಿಂಬಾಡಿ: ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ನವರಾತ್ರಿ ಉತ್ಸವದ ಹಸಿರುವಾಣಿ (ಹೊರೆಕಾಣಿಕೆ) ಯ ಸಮರ್ಪಣೆಯ ಮೆರವಣಿಗೆಯು ಇಂದು ಬೆಳಿಗ್ಗೆ ಕೋಡಿಂಬಾಡಿ ವಿನಾಯಕ ನಗರದ ಮಹಿಷಮರ್ದಿನಿ ದ್ವಾರದಿಂದ ಗ್ರಾಮದ ಹಿರಿಯರಾದ ಗೌರವಾನ್ವಿತ ನಾರಾಯಣ ಆಚಾರ್ಯ ಕೊಂಬಕೋಡಿ ಮತ್ತು ಮಾಂಕು ಮೇಸ್ತ್ರಿ ಕೃಷ್ಣಗಿರಿಯವರ ಹಸ್ತದಿಂದ ಉದ್ಘಾಟನೆಗೊಂಡು ಪ್ರಾರಂಭವಾಯಿತು.ಮೆರವಣಿಗೆಯಲ್ಲಿ ಊರಿನ ಹಲವಾರು ಗೌರವಾನ್ವಿತರು ಮತ್ತು ಶ್ರೀ ದೇವಿಯ ಭಕ್ತಾದಿಗಳು ಉಪಸ್ಥಿತರಿದ್ದರು.
ವಿನಾಯಕ ನಗರದಿಂದ ಮಠಂತಬೆಟ್ಟುವಿಗೆ ಸಾಗಿ ಬಂದ ಮೆರವಣಿಗೆಯನ್ನು ದೇವಳದಲ್ಲಿ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಪ್ರಧಾನ ಅರ್ಚಕರಾದ ರಾಮಕೃಷ್ಣ ಭಟ್ ರವರು ಪ್ರಾರ್ಥನೆಗೈದು,ಹಸಿರುವಾಣಿ ಯನ್ನು ದೇವರರಿಗೆ ಅರ್ಪಿಸಲಾಯಿತು,ಹೊರೆಕಾಣಿಕೆ ಸಂದಾಯ ಮಾಡಿದ ಮತ್ತು ಶ್ರೀ ದೇವೆಯ ಸರ್ವ ಭಕ್ತಾದಿಗಳಿಗೆ ಸನ್ಮಂಗಲವನ್ನು ಪ್ರಾರ್ಥಿಸಲಾಯಿತು.