Published
3 months agoon
By
Akkare Newsರಾಜ್ಯ ಪ್ರಶಸ್ತಿ ಪುರಸ್ಕೃತ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್, ಇದರ ಆಶ್ರಯದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ತಾಲೂಕು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮಂಗಳೂರು, ಪ್ರಾಥಮಿಕ ಅರೋಗ್ಯ ಕೇಂದ್ರ ಪಂಜ, ಗ್ರಾಮ ಪಂಚಾಯತ್ ಪಂಜ ಇದರ ಸಹಯೋಗದೊಂದಿಗೆ ಹಾಗೂ ಹಲವು ಸಂಘ- ಸಂಸ್ಥೆಗಳ ಸಹಕಾರದೊಂದಿಗೆ ರಕ್ತದಾನ ಶಿಬಿರ ಅ. 6 ಪಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
॥ ಗ್ರಾಮ ಪಂಚಾಯತು ಪಂಜ
→ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ (ರಿ)
ಬ್ರಹತ್ ರಕ್ತದಾನ ಶಿಬಿರ
ಸುಳ್ಯ ತಾಲೂಕು ಭಾರತೀಯ ರೆಡ್ ಕ್ರಾಸ್ ಸೊಸೈಟಿ ಸಭಾಪತಿ ಪಿ.ಬಿ ಸುಧಾಕರ ರೈ ಶಿಬಿರವನ್ನ ಉದ್ಘಾಟಿಸಿ, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್‌ನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಶಿಬಿರಕ್ಕೆ ದೇಣಿಗೆ ಚೆಕ್ ಹಸ್ತಾಂತರಿಸಿರು.
ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿಧರ್ ಪಳಂಗಾಯ, ಭಾರತೀಯ ರೆಡ್ ಕ್ರಾಸ್ ಸೊಸೈಟಿನ ಕೋಶಾಧಿಕಾರಿ ವಿನಯ್ ಬೆಳ್ಳಾರೆ, ರಕ್ತದಾನ ಶಿಬಿರದ ಸಂಚಾಲಕ ಸುಜಿತ್ ಪಂಬೆತ್ತಾಡಿ, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಕಾರ್ಯದರ್ಶಿ ಶರತ್ ಕುವ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪುರುಷೋತ್ತಮ ನಾಗತೀರ್ಥ ಪ್ರಾರ್ಥಿಸಿದರು.ಜನಾರ್ದನ ನಾಗತೀರ್ಥ ಸ್ವಾಗತಿಸಿದರು.ಶರತ್ ಕುದ್ವ ವಂದಿಸಿದರು. ಮಂಜುಳಾ ನಾಗತೀರ್ಥ ನಿರೂಪಿಸಿದರು.