Published
3 months agoon
By
Akkare Newsಪುತ್ತೂರು; ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಸಲಹಾ ಸಮಿತಿ ಸಭೆಯು ಇಂದು ದಿನಾಂಕ 6.10.2024 ರಂದು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಕೃಷ್ಣ ಪ್ರಸಾದ್ ಆಳ್ವ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಶ್ರೀ ಎಂ ಎಸ್ ಮೊಹಮ್ಮದ್ ರವರು ಮುಂಬರುವ ವಿಧಾನಪರಿಷತ್ ಚುನಾವಣೆಯ ರೂಪ ರೇಖೆಗಳ ಬಗ್ಗೆ ಸಭೆಗೆ ವಿವರ ನೀಡಿದರು ಕೆಪಿಸಿಸಿ ಸಂಯೋಜಕರಾದ ಶ್ರೀ ಹೇಮನಾಥ್ ಶೆಟ್ಟಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಪದ್ಮನಾಭ ಪೂಜಾರಿ,ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರುಗಳಾದ ಡಾಕ್ಟರ್ ರಾಜಾರಾಮ್, ಶ್ರೀ ಮುರಳಿಧರ್ ರೈ ಮಂಟಂದಬೆಟ್ಟು, ಶ್ರೀ ಪ್ರವೀಣ್ ಚಂದ್ರ ಆಳ್ವ,ಶ್ರೀ ಉಮಾನಥ ಶೆಟ್ಟಿ ಪೇರ್ನೆ, ಕೆಪಿಸಿಸಿ ಸಂಯೋಜಕರಾದ ನೂರುದ್ದೀನ್ ಸಾಲ್ಮರ, ಕೆಪಿಸಿಸಿ ಸದಸ್ಯರಾದ ಶ್ರೀ ಪ್ರಸಾದ್ ಕೌಶಲ್ ಶೆಟ್ಟಿ, ದ. ಕ.ಜಿಲ್ಲಾ ಸೇವಾ ದಳದ ಅಧ್ಯಕ್ಷರಾದ ಶ್ರೀ ಜೋಕಿಂ ಡಿಸೋಜಾ, ಶ್ರೀ ನಿರ್ಮಲ್ ಕುಮಾರ್ ಜೈನ್, ಶ್ರೀ ವಿಶ್ವಜಿತ್ ಅಮ್ಮುಂಜ, ಶ್ರೀ ಸಂತೋಷ್ ಬಂಡಾರಿ, ಎನ್ ಎಸ್ ಯು ಐ ಪುತ್ತೂರು ಅಧ್ಯಕ್ಷರಾದ ಶ್ರೀ ಎಡ್ವರ್ಡ್ ಡಿಸೋಜ, ಶ್ರೀ ದಾಮೋದರ್ ಬಂಡಾರ್ಕರ್ ,ಸನತ್ ರೈ ಭಾಗವಹಿಸಿ ವಿವಿಧ ಸಲಹೆ ಸೂಚನೆಯನ್ನು ನೀಡಿದರು.