ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಧಾರ್ಮಿಕ

ಶ್ರೀ ಶಾರದಾ ಭಜನಾ ಮಂದಿರ ವೀರಕಂಭದಲ್ಲ 40 ನೇ ವರ್ಷದ ಶ್ರೀ ಶಾರದಾ ಮಹೋತ್ಸವ

Published

on

ಕಲ್ಲಡ್ಕ : ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಶ್ರೀ ಶಾರದಾ ಭಜನಾ ಮಂದಿರ ವಿರ ಕಂಬದಲ್ಲಿ 40ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಅಕ್ಟೋಬರ್ 3 ರಿಂದ ಆರಂಭಗೊಂಡಿದ್ದು ಅಕ್ಟೋಬರ್ 13 ನೇ ತಾರೀಖಿನ ತನಕ ನಡೆಯಲಿರುವುದು.

 

11-10-2024 ನೇ ಶುಕ್ರವಾರ ಬೆಳಿಗ್ಗೆ ಗಣಹೋಮದ ನಂತರ ಶ್ರೀ ಶಾರದ ಮಾತೆಯ ವಿಗ್ರಹ ಪ್ರತಿಷ್ಠೆ ನೆರವೇರಲಿದ್ದು, ರಾತ್ರಿ 8 ಗಂಟೆ ತನಕ ಅರ್ಥ ಏಕಹ ಭಜನಾ ಕಾರ್ಯಕ್ರಮ ನೆರವೇರಲಿರುವುದು.

 

 

ದಿನಾಂಕ 12-10-2024 ಶನಿವಾರ ಸಂಜೆ 5 ಗಂಟೆಗೆ ದುರ್ಗನಮಸ್ಕಾರ ಪೂಜೆ ನೆರವೇರಲಿದ್ದು, ರಾತ್ರಿ 8 ಗಂಟೆಗೆ ಸರಿಯಾಗಿ ಸಾರ್ವಜನಿಕ ಅನ್ನದಾನದ ಬಳಿಕ ಉಸ್ತವ ಸಮಿತಿ ಅಧ್ಯಕ್ಷರಾದ ದಿನೇಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಲಿದ್ದು,ರಾಮಕೃಷ್ಣ ತಪೋವನ ಪೊಳಲಿಯ ಸ್ವಾಮಿ ವಿವೇಕ ಚೈತನ್ಯಾ ನಂದ ಆಶೀರ್ವಚನ ನೀಡಲಿರುವರು , ಧಾರ್ಮಿಕ ಉಪನ್ಯಾಸವನ್ನು ರಾಧಾಕೃಷ್ಣ ಏರುoಬು ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಅಗ್ರಜ ಬಿಲ್ಡರ್ಸ್ ಮಾಲಕರಾದ ಸಂದೇಶ್ ಕುಮಾರ್ ಶೆಟ್ಟಿ ಅರಬೆಟ್ಟು ಭಾಗವಹಿಸಲಿರುವರು.

 

 

 

ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಳಿರುವುದು.

ದಿನಾಂಕ 13-10-2024 ನೇ ಆದಿತ್ಯವಾರ ಮಧ್ಯಾಹ್ನ ರಂಗಪೂಜೆ, ಮಹಾಪೂಜೆ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ನಡೆದು ಸಂಜೆ ಗಂಟೆ 4ಕ್ಕೆ ಸರಿಯಾಗಿ ವಿಸರ್ಜನಾ ಪೂಜೆ ನಡೆದು ನಂತರ ಶ್ರೀ ಶಾರದಾ ಮಾತೆಯ ಭವ್ಯ ಶೋಭಯಾತ್ರೆ ನೆರವೇರಲಿರುವುದು.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement