Published
2 months agoon
By
Akkare Newsಬೆಳ್ತಂಗಡಿ ಘಾಟಿ ಪ್ರದೇಶದಲ್ಲಿ ಬುಧವಾರ ಮಧ್ಯಾಹ್ನ ಬಳಿಕ ಭಾರಿ ಮಳೆ ಸಹಿತ ನೀರು ಹರಿದುಬರುತ್ತಿರುವ ಪರಿಣಾಮ ಚಾರ್ಮಾಡಿ ಘಾಟಿ 3 ನೇ ತಿರುವಿನಲ್ಲಿ ಲಘು ಭೂ ಕುಸಿತಗೊಂಡಿದೆ.
ಇದರಿಂದ ಘಾಟಿಯ ಮೂರನೇ ತಿರುವಿನ ಬಳಿ ಎರಡು ಮರಗಳು ರಸ್ತೆಗೆ ಉರುಳಿ ಬಿದ್ದಿವೆ. ಮರಗಳು ಉರುಳಿ ಬೀಳುವ ವೇಳೆ ಲಘು ಪ್ರಮಾಣದ ಗುಡ್ಡ ಕುಸಿತವು ಉಂಟಾಗಿದೆ. ಮರಗಳು ರಸ್ತೆಗೆ ಬಿದ್ದ ಪ್ರದೇಶದಲ್ಲಿ ಒಂದು ವಾಹನ ಮಾತ್ರ ಸಂಚರಿಸುವಷ್ಟು ಜಾಗ ಇದ್ದು ಇದರಿಂದ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿತ್ತು.
ಘಾಟಿ ಪ್ರದೇಶದಲ್ಲಿ ನಿರಂತರ ಎರಡು ತಾಸಿಗಿಂತ ಅಧಿಕಕಾಲ ಮಳೆ ಸುರಿದ ಕಾರಣ ಘಾಟಿ ರಸ್ತೆಯುದ್ದಕ್ಕೂ ಭಾರಿ ಪ್ರಮಾಣದಲ್ಲಿ ನೀರು ಹರಿದುಬಂದಿದೆ.
‘ಸ್ಥಳಕ್ಕೆ ಗೃಹರಕ್ಷಕದಳ, ಅರಣ್ಯ ಇಲಾಖೆ ಸಿಬಂದಿ ಹಾಗೂ ಸ್ಥಳೀಯರು ಜೆಸಿಬಿ ಮೂಲಕ ಮರ ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.