Published
2 months agoon
By
Akkare Newsರೌಡಿಗಳಂತೆ ಬಡಿದಾಡಿಕೊಂಡ ವಿಟ್ಲ-ಮಂಗಳೂರು ಸೆಲಿನಾಬಸ್ ಮತ್ತು ಧರಿತ್ರಿ ಬಸ್ ಸಿಬ್ಬಂದಿಗಳು ಕಣ್ಣಿದ್ದು ಕುರುಡಾದ ಸಾರಿಗೆ ಮತ್ತು ಪೊಲೀಸ್ ಇಲಾಖೆ
ವಿಟ್ಲ-ಮಂಗಳೂರು ಮಧ್ಯೆ ಸಂಚರಿಸುವ ಸೆಲಿನಾ ಬಸ್ ಮತ್ತು ಪುತ್ತೂರು-ಮಂಗಳೂರು ಮಧ್ಯೆ ಸಂಚರಿಸುವ ಧರಿತ್ರಿ ಬಸ್ ಸಿಬ್ಬಂದಿಗಳು ಪ್ರಯಾಣಿಕರ ಕಣ್ಮುಂದೆಯೇ ಪರಸ್ಪರ ಬಡಿದಾಡುತ್ತಾ ಭೀತಿಯ ವಾತಾವರಣ ಸೃಷ್ಟಿಸಿದ್ದಾರೆ. ಒಂದು ಬಸ್ ಚಾಲಕ ಉಗುಳುವಾಗ ಇನ್ನೊಂದು ಬಸ್ ಚಾಲಕನ ಮೈಗೆ ಬಿತ್ತೆಂಬ ನೆಪದಲ್ಲಿ ಪರಸ್ಪರ ಬಡಿದಾಡಿ ಕೊಂಡಿದ್ದಾರೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಖಾಸಗಿ ಬಸ್ ಸಿಬ್ಬಂದಿಗಳ ಅಟ್ಟಹಾಸ ಮಿತಿಮೀರಿದ್ದು ಸಭ್ಯ ಪ್ರಯಾಣಿಕರು ಓಡಾಡಲು ಹಿಂಜರಿಯುತ್ತಿದ್ದಾರೆ. ಪೊಲೀಸರು, ಆರ್ ಟಿ ಒ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿಯೇ ಖಾಸಗಿ ಬಸ್ ಸಿಬ್ಬಂದಿಗಳು ಅನಾಗರಿಕರಾಗಿದ್ದಾರೆಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ಬಸ್ ವ್ಯವಸ್ಥೆ ಎಂಬುದು ಸೇವೆಯೆಂಬುದು ಇಂದಿನ ಸಿಬ್ಬಂದಿಗಳಿಗೆ ತಿಳಿದಿಲ್ಲವಾಗಿದೆ. ತಮ್ಮದೇ ಸಾಮ್ರಾಜ್ಯ, ತಾವು ಮಾಡಿದ್ದೇ ಆಟ, ನಾವು ನಡೆದಿದ್ದೇ ದಾರಿ ಎಂಬುದನ್ನು ತಿಳಿದಿರುವ ಇಂತಹ ಸಿಬ್ಬಂದಿಗಳ ಸಮಾಜ ಕಂಟಕ ವರ್ತನೆ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಅಧಿಕಾರಿಗಳು ಕೇವಲ ಬಸ್ಸನ್ನು ವಶಕ್ಕೆ ಪಡೆದು ಪಿಟ್ಟಿ ಕೇಸು ಜಡಿದು ಜುಜುಬಿ ದಂಡ ವಸೂಲಿ ಮಾಡುವ ಬದಲು ಖಾಸಗಿ ಬಸ್ ಮಾಲಿಕರ ಮಾಮೂಲಿ ಹಣಕ್ಕೆ ತಲೆಬಾಗದೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಭ್ಯ ನಾಗರಿಕರ ಒತ್ತಾಯವಾಗಿದೆ.