ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ಕ್ಷೇತ್ರದಲ್ಲಿ ಗಯಾಪದ ಕಲಾವಿದೆರ್ ಉಬಾರ್ ಅಭಿನಯದ “ನಾಗಮಾಣಿಕ್ಯ” ಚಾರಿತ್ರಿಕ ತುಳು ನಾಟಕ ರಂಗಾರ್ಪಣೆ

Published

on

ಪುತ್ತೂರು: ಅ.೬ನೇ ರವಿವಾರದಮದು ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ಕ್ಷೇತ್ರದಲ್ಲಿ ನವರಾತ್ರಿ ಉತ್ಸವ ಪ್ರಯುಕ್ತ ಗಯಾಪದ ಕಲಾವಿದ ಉಬಾರ್ ಇವರ ಅಭಿನಯದ ಈ ವರ್ಷದ ಕಲಾಕಾಣಿಕೆ ಅದ್ದೂರಿ ತುಳು ನಾಟಕ ಚಾರಿತ್ರಿಕ ನಾಟಕ “ನಾಗಮಾಣಿಕ್ಯ” ವನ್ನು ವಿಶೇಷ ಅತಿಥಿಗಳ ಉಪಸ್ಥಿತಿಯಲ್ಲಿ ಕ್ಷೇತ್ರದ ಚಿನ್ಮಯಿ ಸಭಾಭವನದಲ್ಲಿ ರಂಗಾರ್ಪಣೆಗೊಂಡಿತು.

 

ಈ ಶುಭ ಸಮಾರಂಭದಲ್ಲಿ ಶ್ರೀ ರಾಧಕೃಷ್ಣ ನಾಯಕ್ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀಕ್ಷೇತ್ರ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನ ಉಬಾರ್, ಶ್ರೀ ಯು.ಜಿ.ರಾಧ ಆಡಳಿತ ಮೊಕ್ತೇಸರರು, ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನ, ಶ್ರೀ ಪಂಜಿಗುಡ್ಡೆ ಈಶ್ವರ ಭಟ್ ಅಧ್ಯಕ್ಷರು ಬನ್ನೂರು ರೈತರ ಸೇವಾ ಸಹಕಾರಿ ಸಂಘ, ಶ್ರೀ ನಿರಂಜನ ರೈ ಮಠಂತಬೆಟ್ಟು, ಮಾಜಿ ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ ಶ್ರೀ ಕ್ಷೇತ್ರ ಮಠಂತಬೆಟ್ಟು, ಜಗನ್ನಾಥ ಶೆಟ್ಟಿ ಅಧ್ಯಕ್ಷರು ನವರಾತ್ರಿ ನವರಾತ್ರಿ ಉತ್ಸವ ಸಮಿತಿ, ಗುಣಕರ ಅಗ್ನಾಡಿ ಉದ್ಯಮಿಗಳು, ಉಪ್ಪಿನಂಗಡಿ ನಾಟಕದ ರಚನೆಗಾರ ತುಳುನಾಡ ಕಲಾತಪಸ್ವಿ, ಶ್ರೀ ರವಿಶಂಕರ ಶಾಸ್ತ್ರಿ ಮಣಿಲ, ಕಾರ್ತಿಕ್ ಶಾಸ್ತ್ರಿ ಮಣಿಲ, ತಂಡದ ಸಂಚಾಲಕ ಕಿಶೋರ್ ಜೋಗಿ ಇವರುಗಳ ಉಪಸ್ಥಿತಿಯಲ್ಲಿ ದೀಪ ಬೇಳಗಿಸಿ ನಾಟಕವನ್ನು ರಂಗಾರ್ಪಣೆ ಗೊಳಿಸಿ ಶುಭವನ್ನು ಹಾರೈಸಿದರು.

ಶ್ರೀ ಬಾಲಕೃಷ್ಣ ಪೂಜಾರಿ ನಿರಾಲ ಪೆರುವಾಯಿ ಸಾರಥ್ಯದ ಗಯಾಪದ ಕಲಾವಿದರ ಉಬಾರ್ ಅಭಿನಯದ ಈ ವರ್ಷದ ನೂತನ ಕಲಾಕಾಣಿಕೆಯ ಪ್ರಥಮ ಪದರ್ಶನ ನಾಗ ಮಾಣಿಕ್ಯ ಚಾರಿತ್ರಿಕ ತುಳು ನಾಟಕ ಪ್ರದರ್ಶನವಾಯಿತು, ವಿನೂತನ ಶೈಲಿಯ ಅದ್ದೂರಿ ರಂಗವಿನ್ಯಾಸ ಅನೇಕ ವಿಶೇಷತೆಗಳ ಜೊತೆಗೆ ಸಂಪೂರ್ಣ ಧ್ವನಿ ಮುದ್ರಿತ ನಾಟಕವು ಕಲಾಭಿಮಾನಿಗಳನ್ನು ನಾಟಕದ ಕೊನೆಯವರೆಗೂ ಕುಳಿತು ನೋಡುವಂತೆ ಮಾಡಿ ಯಶಸ್ವಿ ಪ್ರದರ್ಶನವಾಯಿತು. ದ.ಕ ಜಿಲ್ಲೆಯ ಪುತ್ತೂರು ಸುಳ್ಯ ಬಂಟ್ವಾಳ ಮೊದಲಾದ ತಾಲೂಕಿನಲ್ಲಿ ಪ್ರಥಮಬಾರಿಗೆ ತುಳು ರಂಗ ಭೂಮಿಯಲ್ಲಿ ಅದ್ದೂರಿ ರಂಗ ವಿನ್ಯಾಸದೊಂದಿಗೆ ಮೂಡಿ ಬಂದ ನಾಗದೇವತೆಯ ಕಥಾವಸ್ತುವಿನೊಂದಿಗೆ ನಾಟಕವು ಉತ್ತಮ ಪ್ರದರ್ಶನವಾಗಿ ಕಿಕ್ಕಿರುದು ಸೇರಿದ ಕಲಾಭಿಮಾನಿಗಳ ಪ್ರಶಂಸೆಗೆ ಪಾತ್ರವಾಯಿತು.

 

ತುಳುನಾಡ ಕಲಾ ತಪಸ್ವಿ ಶ್ರೀ ರವಿಶಂಕರ ಶಾಸ್ತ್ರಿ ಮಣಿಲ ಇವರ ಕಲ್ಪನೆಯಲ್ಲಿ ಮೂಡಿಬಂದ ಚಾರಿತ್ರಿಕ ತುಳುನಾಟಕ ನಾಗ ಮಾಣಿಕ್ಯ ವನ್ನು ರಚಿಸಿ ನಿರ್ದೇಶನವನ್ನು ಮಾಡಿ ಅಭಿನಯವನ್ನು ನೀಡಿ ಕಲಾಭಿಮಾನಿಗಳನ್ನು ಬೆರಗು ಗೊಳಿಸುವಂತೆ ಮಾಡಿದ್ದಾರೆ.

 

 

 

ಸಂಗೀತ ಮಾಂತ್ರಿಕ ಶ್ರೀ ಕಾರ್ತಿಕ್ ಶಾಸ್ತ್ರಿ ಮಣಿಲ ಇವರ ಸಂಗೀತದೊಂದಿಗೆ ಶ್ರೀ ರಾಜೇಶ್ ಶಾಂತಿನಗರ, ಇವರ ಸಂಪೂರ್ಣ ಸಲಹೆ ಸಹಕಾರಿದೊಂದಿಗೆ ರಂಗ ವಿನ್ಯಾಸದ ವಿಶೇಷ ಪರಿಕಲ್ಪನೆ, ರಿತು ಸೌಂಡ್ಸ್ ಮತ್ತು ಇದರ ಕೃಷ್ಣ ಮುದ್ಯ ಮತ್ತು ಸಿದ್ದು ಬೆದ್ರ ಇವರ ಕೈ ಚಳಕ, ಶ್ರೀ ಪ್ರದೀಪ ಕಾವು, ನವ್ಯಾ ರಾಜ್ ಕಲ್ಲಡ್ಕ ಇವರ ಉತ್ತಮ ರೀತಿಯ ಮುಖವರ್ಣಿಕೆಯೊಂದಿಗೆ ಅತ್ಯಂತ ಯಶಸ್ವಿ ಪ್ರದರ್ಶನವಾಗಿ ಮೂಡಿ ಬಂತು.
ರಂಗಾರ್ಪಣೆ ಕಾರ್ಯಕ್ರಮವನ್ನು ತಂಡದ ಕಲಾವಿದ ಬಿ ರಂಗಯ್ಯ ಬಲ್ಲಾಳ್ ನಿರೂಪಿಸಿ ವಂದನಾರ್ಪಣೆಯನ್ನು ಸಲ್ಲಿಸಿದರು.

 

 

ಕಲಾವಿದರು ಗಳಾಗಿ ಶ್ರೀ ಕಿಶೋರ್ ಜೋಗಿ ಉಬಾರ್, ಶ್ರೀ ದಿವಾಕರ ಸುರ್ಯ, ಶ್ರೀ ಸತೀಶ್ ಶೆಟ್ಟಿ ಹೆನ್ನಾಳ, ಶ್ರೀ ಬಿ ರಂಗಯ್ಯ ಬಲ್ಲಾಳ್ ಕೆದಂಬಾಡಿ ಬೀಡು, ಶ್ರೀ ರಾಜೇಶ್ ಶಾಂತಿನಗರ, ರಾಜಶೇಖರ ಶಾಂತಿನಗರ , ಕುಮಾರಿ ಅನುಷಾ ಪುರುಷರಕಟ್ಟೆ, ಕುಮಾರಿ ಸಂಧ್ಯಾಶ್ರೀ ಹಿರೇಬಂಡಾಡಿ, ಶ್ರೀ ಸುನಿಲ್ ಪೆರ್ನೆ, ಶ್ರೀ ಚೇತನ್ ಪಡೀಲ್, ಲಕ್ಷ್ಮಣ ಬೆಳ್ಳಿಪ್ಪಾಡಿ, ಉಷಾ ಲಕ್ಷ್ಮಣ ಬೆಳ್ಳಿಪ್ಪಾಡಿ, ಶ್ರೀ ಉದಯ್ ಆರ್ ಪುತ್ತೂರು ಶ್ರೀ ಅನೀಶ್ ಉಬಾರ್, ಮಾ| ಲಿತಿನ್ ಶಾಂತಿನಗರ ಇವರ ಅಮೋಘ ಅಭಿನಯ ಈ ನಾಟಕದ ಯಶ್ವಿಗೆ ಕಾರಣವಾಯಿತು. ನಾಟಕ ಬುಕ್ಕಿಂಗ್ಗೆ ಈ ನಂಬರನ್ನು ಸಂಪರ್ಕಿಸಿ 9902543273, 9008136330
ನಾಟಕದ ತಾಂತ್ರಿಕ ವರ್ಗದಲ್ಲಿ ಶ್ರೀ ಭರತ್ ಕುಮಾರ್ ಶಾಂತಿನಗರ, ಶ್ರೀ ನವೀನ್ ಶಾಂತಿನಗರ, ಶ್ರೀ ಹರ್ಷ ಶಾಂತಿನಗರ ಇವರುಗಳ ಕೈ ಚಳಕ ರಂಗ ವಿನ್ಯಾಸವನು ಕಲಾಭಿಮಾನಿಗಳ ಮನ ಮೆಚ್ಚುವಂತೆ ಮಾಡಿತು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement