Published
2 months agoon
By
Akkare Newsಮಂಗಳೂರು, : ನಗರದ ಹೊರವಲಯದ ಬೆಂಗ್ರೆಯಲ್ಲಿ ಸರ್ಕಾರಿ ಜಾಗದಿಂದ ಅಕ್ರಮವಾಗಿ ಮರಳನ್ನು ತೆಗೆದು ಸಾಗಾಟ ಮಾಡಲಾಗುತ್ತಿದೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.
ತೋಟಬೆಂಗ್ರೆ ಹಿಂದೂ ರುದ್ರಭೂಮಿಯ ಸಮೀಪ ಸುಮಾರು 6 ಎಕರೆ ಮೀನುಗಾರಿಕಾ ಇಲಾಖೆಗೆ ಬಂದರು ಇಲಾಖೆಯಿಂದ ಹಸ್ತಾಂತರಿಸಲಾಗಿದೆ. ಜೆಟ್ಟಿ ನಿರ್ಮಾಣ ಮಾಡುವ ಉದ್ದೇಶದಿಂದ ಇದನ್ನು ನೀಡಲಾಗಿದ್ದು, ಬಾಕಿ ಉಳಿದ ಜಾಗದಲ್ಲಿ ಹಾಗೆಯೇ ಎಷ್ಟೋ ವರ್ಷಗಳಿಂದ ಮರಳು ಇದೆ. ಅದನ್ನು ತೆರವು ಮಾಡುವಂತಿಲ್ಲ. ಆದರೆ 3-4 ತಿಂಗಳ ಹಿಂದಿನಿಂದಲೇ ಇಲ್ಲಿಂದ ಯಾರೋ ಕೆಲವರು ರಾತ್ರಿ ಹೊತ್ತು ಜೆಸಿಬಿ ಹಾಗೂ ಟಿಪ್ಪರ್ ಬಳಸಿ ಮರಳು ಕೊಂಡೊಯ್ಯುದ್ದಾರೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಈ ರೀತಿ ಮರಳು ತೆಗೆದ ಕಾರಣ ಸಮತಟ್ಟಾಗಿರುವ ಜಾಗದಲ್ಲಿ 5-6 ಅಡಿ ಆಳದ ಹೊಂಡಗಳು ನಿರ್ಮಾಣವಾಗಿದ್ದು, ಇವು ಅಪಾಯಕಾರಿಯಾಗಿದೆ ಎಂದು ಸ್ಥಳೀಯರು ಗಣಿ ಮತ್ತು ಭೂವಿಜ್ಞಾನ ಇಲಾಖೆ, ಸಿಆರ್‌ಝಡ್ ಇಲಾಖೆಗೆ ಮೌಖಿಕ ದೂರು ನೀಡಿದ್ದಾರೆ. ಇನ್ನು ಈ ದೂರಿಗೆ ಪ್ರತಿಕ್ರಿಯಿಸಿದ ಗಣಿ ಇಲಾಖೆ ಹಿರಿಯ ಜಿಯೊಲಜಿಸ್ಟ್ ಮೌಖಿಕವಾಗಿ ದೂರು ಕೊಟ್ಟು ತಕ್ಷಣ ಬರಬೇಕೆಂದರೆ ಕಷ್ಟ. ನಾವು ಬೇರೆ ಕೆಲಸದಲ್ಲಿರುತ್ತೇವೆ. ಆದರೆ ಲಿಖಿತವಾಗಿ ದೂರು ನೀಡಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ.