Published
2 months agoon
By
Akkare Newsಕಲ್ಲಡ್ಕ: ಹಿಂದೂ ಸಮಾಜ ಗಟ್ಟಿ ಆಗಬೇಕಾದರೆ ಧರ್ಮ ಅನುಷ್ಠಾನ ಸರಿಯಾದ ಮಾರ್ಗದರ್ಶನದಲ್ಲಿ ಆಗ್ಬೇಕು. ಸಾಧು ಸಂತರು,ಅವತಾರ ಪುರುಷರು, ಮಹನೀಯರು, ದಾರ್ಶನಿಕರು ನೀಡಿದ ಸಂದೇಶವನ್ನು ಯುವ ಪೀಳಿಗೆಗೆ ಸರಿಯಾದ ಮಾರ್ಗದರ್ಶನದಲ್ಲಿ ನೀಡಬೇಕು ಎಂದು ರಾಮಕೃಷ್ಣ ತಪೋವನ ಪೊಳಲಿಯ ಸ್ವಾಮಿ ವಿವೇಕ ಚೈತನ್ಯಾನಂದ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶಾರದಾ ಉಸ್ತವ ಸಮಿತಿ ಅಧ್ಯಕ್ಷರಾದ ದಿನೇಶ್ ಪೂಜಾರಿ ವಹಿಸಿದ್ದರು.
ಸಭಾ ಕಾರ್ಯಕ್ರಮದ ಮೊದಲು ಸ್ವಾಮಿ ವಿವೇಕ ಚೈತನ್ಯಾನಂದರವರ ಉಪಸ್ಥಿತಿಯಲ್ಲಿ ದುರ್ಗಾ ನಮಸ್ಕಾರ ಪೂಜಾ ಕಾರ್ಯಕ್ರಮ ಜರಗಿತು.
ವೇದಿಕೆಯಲ್ಲಿ ನಾರಾಯಣ ಭಟ್ ಬೆತ್ತಸರವು, ಆನಂದ ಆಳ್ವ ಗೋಳ್ತಾಮಜಲ್ ಉಪಸ್ಥಿತರಿದ್ದರು.
ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ಸ್ಥಳೀಯ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ಕೆಎಂಎಫ್ ವಿಸ್ತರಣಾಧಿಕಾರಿ ಜಗದೀಶ್ ಎ ಕಾರ್ಯಕ್ರಮ ನಿರೂಪಿಸಿದರು.