Published
3 months agoon
By
Akkare Newsಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈ ನೇತೃತ್ವದಲ್ಲಿ ದೀಪಾವಳಿ ಪ್ರಯುಕ್ತ ನ ೨ ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ಅಶೋಕ ಜನ-ಮನ ಕಾರ್ಯಕ್ರಮಕ್ಕೆ ತಾಲೂಕಿನ ಪ್ರತೀ ಮನೆಗೂ ಆಹ್ವಾನವನ್ನು ನೀಡಲಾಗುವುದು ಎಂದು ರೈ ಎಸ್ಟೇಟ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ಹೇಳಿದರು.
ಅವರು ತಿಂಗಳಾಡಿ ಗ್ರಾಪಂ ಸಭಾಂಗಣದಲ್ಲಿ ನಡೆದ ಅಶೋಕ ಜನಮನದ ಕರಪತ್ರವನ್ನು ಬಿಡುಗಡೆ ಮಾಡುವ ಮೂಲಕ ಗ್ರಾಮ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದರು.
ಪುತ್ತೂರು ತಾಲೂಕಿನ ಪ್ರತೀ ಗ್ರಾಮಗಳಿಗೂ ನಮ್ಮ ತಂಡ ಭೇಟಿ ನೀಡಿ ಅಶೋಕ ಜನ-ಮನ ಕಾರ್ಯಕ್ರಮದ ಆಹ್ವಾನವನ್ನು ನೀಡಲಿದ್ದೇವೆ. ಗ್ರಾಮದ ಪ್ರತೀ ಮನೆ ಮನೆಗೆ ತೆರಳಲು ಅಸಾಧ್ಯವಾದ ಕಾರಣ ಗ್ರಾಮದ ಪ್ರಮುಖ ಕೆಂದ್ರಗಳಲ್ಲಿ ಕಾರ್ಯಕ್ರಮವನ್ನು ನಡೆಸಿ ಗ್ರಾಮಸ್ಥರಿಗೆ ಆಹ್ವಾನವನ್ನು ನೀಡುತ್ತೇವೆ. ಗ್ರಾಮದಲ್ಲಿ ನಡೆಯುವ ಪ್ರಚಾರ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಹಾಗೂ ಅಶೋಕ್ ರಐ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮದ ಯಶಶ್ವಿಗೆ ಸಹಕಾರವನ್ನು ನೀಡಬೇಕು ಎಂದು ಮನವಿ ಮಾಡಿದರು. ದೀಪಾವಳಿಗೆ ಪ್ರತೀ ವರ್ಷ ಶಾಸಕರಾದ ಅಶೋಕ್ ರಐ ಅವರ ನೇತೃತ್ವದಲ್ಲಿ ವಸ್ತ್ರ ವಿತರಣೆ ಕಾರ್ಯಕ್ರಮ ನಡೆಸುವ ಮೂಲಕ ಬಡವರ ಜೊತೆ ಸಹಭೋಜನವನ್ನು ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಮಹಿಳೆಯರು, ಪುರುಷರು ಹಾಗೂ ಮಕ್ಕಳು ಭಾಗವಹಿಸಿ ಕಾರ್ಯಕ್ರಮವನ್ನು ಯಸಶ್ವಿಗೊಳಿಸಬೇಕು ಎಂದು ವಿನಂತಿಸಿದರು.
ಜನರ ಜೊತೆ ದೀಪಾವಳಿ ಆಚರಣೆ ಉತ್ತಮ ಕೆಲಸ: ಬೋಳೋಡಿ
ಬಡವರ ಬಂಧು ಎಂದೇ ಖ್ಯಾತಿಯನ್ನು ಪಡೆದ ಪುತ್ತೂರು ಶಾಸಕರಾದ ಅಶೋಕ್ ರೈ ನೇತೃತ್ವದಲ್ಲಿ ಪ್ರತೀ ವರ್ಷ ಜನರ ಜೊತೆ ದೀಪಾವಳಿ ಹಬ್ಬ ಆಚರಣೆ ಮಾಡುತ್ತಿರುವುದು ಉತ್ತಮ ಕೆಲಸವಾಗಿದೆ, ಇದು ದೇವರಿಗೂ ಪ್ರಿಯವಾದ ಕೆಲಸವಾಗಿದೆ ಎಂದು ಹಿರಿಯರಾದ ಬೋಳೋಡಿ ಚಂದ್ರಹಾಸ ರೈ ಹೇಳಿದರು.ಕಳೆದ ಬಾರಿ ಭಾರೀ ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಂಧವರಿಗೆಲ್ಲಾ ವಸ್ತ್ರ ಹಾಗೂ ಊಟವನ್ನು ಕೊಡಲಾಗುತ್ತಿದ್ದು ಇದು ಅತ್ಯಂತ ಪುಣ್ಯದ ಕೆಲಸವಾಗಿದೆ ಇದಕ್ಕೆ ಎಲ್ಲರ ಸಹಕಾರ ಅತೀ ಅಗತ್ಯವಾಗಿದೆ. ಗ್ರಾಮ ಗ್ರಾಮಕ್ಕೆ ಬಂದು ಜನರಿಗೆ ಆಹ್ವಾನ ನೀಡಲಾಗುತ್ತಿದ್ದು ಗ್ರಾಮದ ಪ್ರತೀಯೊಬ್ಬರೂ ಕುಟುಂಬ ಸಮೇತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
೭೫ ಸಾವಿರ ಜನರ ನಿರೀಕ್ಷೆ: ನಿಹಾಲ್ ಪಿ ಶೆಟ್ಟಿ
ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯುವ ಅಶೋಕ ಜನ-ಮನ ಕಾರ್ಯಕ್ರಮದಲ್ಲಿ ಈ ಬಾರಿ ೭೫ ಸಾವಿರಕ್ಕೂ ಮಿಕ್ಕಿ ಜನ ಭಾಗವಹಿಸುವ ನಿರೀಕ್ಷೆ ಇದೆ. ಬೆಳಿಗ್ಗೆಯಿಂದಲೇ ಕಾರ್ಯಕ್ರಮ ಪ್ರಾರಂಭಗೊಳ್ಳಲಿದ್ದು ಪ್ರತೀ ಮನೆಯಿಂದ ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಸಶ್ವಿಗೊಳಿಸುವಂತೆ ಮನವಿ ಮಾಡಿದರು. ವಸ್ತ್ರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಪ್ರತ್ಯೇಕ ಕೌಂಟರ್‌ಗಳನ್ನು ತೆರೆಯಲಾಗಿದೆ. ಜನ ಹೆಚ್ಚು ಸೇರುತ್ತಾರೆ ತೊಂದರೆಯಾಗಬಹುದು ಎಂಬ ಭಯ ಯಾರಿಗೂ ಬೇಡ. ಎಷ್ಟೇ ಜನ ಬಂದರೂ ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಗ್ರಾಮಸ್ಥರು ಕಾರ್ಯಕ್ರಮದ ಬಗ್ಗೆ ಪ್ರತೀ ಮನೆಗೂ ವಿಷಯತಿಳಿಸಿ ಅವರನ್ನು ಕರೆದುಕೊಂಡು ಬರುವಂತೆ ವಿನಂತಿಸಿದರು.
ವೇದಿಕೆಯಲ್ಲಿ ಪ್ರಮುಖರಾದ ಶಿವನಾಥ ರೈ ಮೇಗಿನಗುತ್ತು, ಎ ಕೆ ಜಯರಾಮ ರೈ, ಕಮಲೇಶ್ ಸರ್ವೆದೊಳಗುತ್ತುಸಂತೋಷ್ ನೆಹರೂನಗರ, ಶಶಿ ಕೃಷ್ಣನಗರ,ಸುಚರಿತ್ ಜೈನ್ ಬೊಳುವಾರು ಸೇರಿದಂತೆ ಕೆದಂಬಡಿ ಗ್ರಾಮಸ್ಥರು ಉಸ್ಥಿತರಿದ್ದರು.
ಟ್ರಸ್ಟ್ ಸದಸ್ಯೆ ಪದ್ಮಾವತಿ ಸ್ವಾಗತಿ, ಅರುಣಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.