Published
2 months agoon
By
Akkare Newsಪುತ್ತೂರು: ಫುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 140 ಮತಗಳಿದ್ದು ಇದಕ್ಕಿಂತ ಹೆಚ್ಚಿನ ಮತಗಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಚಲಾವಣೆಯಾಗುವ ವಿಶ್ವಾಸ ಇದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.
ಅವರು ವಿಧಾನಸಭಾ ಚುನಾವಣೆ ಪ್ರಯುಕ್ತ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಕ್ಷದ ಪ್ರಮುಖರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಪಕ್ಷ ಅಭಿವೃದ್ದಿಯಾದರೆ ನಾವು ಅಭಿವೃದ್ದಿಯಾದಂತೆ, ಪಕ್ಷ ನಮಗೆ ಎಲ್ಲವನ್ನೂ ಕೊಟ್ಟಿದೆ. ಪಕ್ಷದ ಋಣವನ್ನು ತೀರಿಸುವ ಕೆಲಸ ನಾವು ಪ್ರತೀಯೊಬ್ಬರೂ ಮಾಡಬೇಕು ಎಂದು ಹೇಳಿದರು.
ಮನೆ ಇಲ್ಲದವರು ಭಯ ಪಡಬೇಡಿ:
ಕ್ಷೇತ್ರದಲ್ಲಿ ಮನೆ ಇಲ್ಲದವರಿಗೆ ಸೈಟ್ ಕೊಡ್ತೇನೆ ಎಂದು ಭರವಸೆ ಕೊಟ್ಟಿದ್ದೆ ಅದನ್ನು ಕೊಟ್ಟೇ ಕೊಡ್ತೇನೆ ಯಾವುದೇ ಅನುಮಾನಬೇಡ. ಈಗಾಗಲೇ ಸೈಟ್ ವಿತರಣೆಗೆ ಜಾಗ ಗುರುತಿಸುವ ಕಾರ್ಯ ನಡೆಯುತ್ತಿದೆ. ಮನೆ ಇಲ್ಲದವರಿಗೆ ಈ ಸೈಟನ್ನು ಕೊಡಲಾಗುತ್ತದೆ ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದರು.
ತೆಂಗಿನ ಕಾಯಿ ಒಡೆದ ಕಾಮಗಾರಿ ಶೀಘ್ರ ಚಾಲನೆ;
ಕಳೆದ ಕೆಲತಿಂಗಳ ಹಿಂದೆ ವಿವಿಧ ಕಾಮಗಾರಿಗೆ ತೆಂಗಿನ ಕಾಯಿ ಒಡೆದಿದ್ದೇನೆ ಆ ರಸ್ತೆಗೆ ಅನುದಾನ ಬಿಡಿಗಡೆಯಾಗಿದೆ ,ಕೆಲಸ ಶೀಘ್ರದಲ್ಲೇ ಆರಂಭವಾಗಲಿದೆ. ನಾವು ಕೊಟ್ಟಮಾತನ್ನೂ ಈಡೇರಿಸುತ್ತೇವೆ ಈ ಬಗ್ಗೆ ಅನುಮಾನ ಬೇಡ ಎಂದು ಶಾಸಕರು ಹೇಳಿದರು.
ನಮ್ಮ ಕಡೆ ಬರುವವರಿದ್ದರೆ ತಿಳಿಸಿ;
ನಮ್ಮ ಪಕ್ಷದ ಅಭಿವೃದ್ದಿ ಕೆಲಸ ಮತ್ತು ಪಂಚ ಗ್ಯಾರಂಟಿ ಯೋಜನೆಯಿಂದ ಆಕರ್ಷಿತರಾಗಿ ನಮ್ಮ ಪಕ್ಷದ ಕಢೆ ಒಲವು ಇದ್ದವರನ್ನು ಸೇರಿಸಿಕೊಳ್ಳಿ, ಅಂಥವರಿದ್ದಲಿ ನಮ್ಮನಕ್ಕೆ ತನ್ನಿ ಎಂದು ಶಾಸಕರು ಹೇಳಿದರು.
ಎಂ ಬಿ ಟೀಂ ಬೆಸ್ಟ್ ಕೆಲಸ ಮಾಡಿದೆ
ನಿಕಟಪೂರ್ವ ಬ್ಲಾಕ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಬಳಗ ಉತ್ತಮ ಕೆಲಸವನ್ನು ಮಾಡಿದ ಕಾರಣ ಕಾಂಗ್ರೆಸ್ ಗೆಲ್ಲಲು ಸಾಧ್ಯವಾಗಿದೆ. ಕಾರ್ಯಕರ್ತರ ನೋವಿಗೆ ಸ್ಪಂದಿಸುವ ಕೆಲಸವನ್ನು ಖಂಡಿತವಾಗಿಯೂ ಮಾಡುತ್ತೇ ಎಂದು ಹೇಳಿದರು.
ನ.2 ಕ್ಕೆ ಸಿದ್ದರಾಮಯ್ಯ ಪುತ್ತೂರಿಗೆ
ನವೆಂಬರ್ 2 ರಂದು ಕೊಂಬೆಟ್ಟು ತಾಲೂಕು ಕ್ರೀಡಂಗಣದಲ್ಲಿ ನಡೆಯುವ ಅಶೋಕ ಜನಮನ ದೀಪಾವಳಿ ಪ್ರಯುಕ್ತ ನಡಯುವ ವಸ್ತ್ರ ವಿತರಣಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಸುಮಾರು 75000 ಮಿಕ್ಕಿ ಜನ ಇದರಲ್ಲಿಭಾಗವಹಿಸಲಿದ್ದಾರೆ ಎಂದು ಶಾಸಕರು ಹೇಳಿದರು.
ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಮಾತನಾಡಿ ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ, ಅಭಿವೃದ್ದಿ ಕೆಲಸಗಳು ವೇಗದಿಂದ ನಡೆಯುತ್ತಿದೆ. ಸರಕಾರದ ಪಂಚ ಗ್ಯಾರಂಟಿಗಳು ಜನರಿಗೆ ತಲುಪಿದೆ ,ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ದಿ ವೇಗ ಪಡೆದುಕೊಂಡಿದೆ ಈ ನಿಟ್ಟಿನಲ್ಲಿ ಜನತೆ ಇಂದು ಕಾಂಗ್ರೆಸ್ ಪರವಾಗಿದೆ. ಮತದಾನದ ಹಕ್ಕು ಇರುವ ಗ್ರಾಪಂ ಸದಸ್ಯರು ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿಯವರಿಗೆ ಮತನೀಡುವಂತೆ ಮನವಿ ಮಾಡಿದರು. ಮುಂಬರುವ ಜಿಪಂ ತಾಪಂ ಚುನಾವಣೆಯಲ್ಲೂ ಕಾಂಗ್ರೆಸ್ ಶಕ್ತಿಯನ್ನು ಬಲಪಡಿಸಬೇಕಾದ ಅಗತ್ಯವಿದೆ ಎಂದು ಮಹಮ್ಮದ್ ಬಡಗನ್ನೂರು ಹೇಳಿದರು. ಪ್ರಭಲ ಶಾಸಕರು ನಮ್ಮಲ್ಲಿರುವಾಗ ನಾವು ಜನರ ಬಳಿ ತೆರಳಿ ಸಮಸ್ಯೆಯನ್ನು ಆಲಿಸುವವರಾಗಬೇಕು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ನ ನಿಕಟಪೂರ್ವ ಅಧ್ಯಕ್ಷರಾದ ಎಂ ಬಿ ವಿಶ್ವನಾಥ ರೈ ಮಾತನಾಡಿ ನಮಗೆ ಪಕ್ಷದ ಮೇಲೆ ಋಣ ಇದೆ. ಕಾಂಗ್ರೆಸ್ ಗೆ ಮತಗಳ ಕೊರತೆ ಇದೆ ಆದರೂ ನಾವೆಲ್ಲರೂ ಮನಸ್ಸು ಮಾಡಿದರೂ ಏನೂ ಮಾಡಲು ಸಾಧ್ಯ. ಕಾಂಗ್ರೆಸ್ ಅಭ್ಯರ್ಥಿ ಅನುಭವಿಯಾಗಿದ್ದಾರೆ ಅವರಿಗೆಮತ ಹಾಕುವ ಮೂಲಕ ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಪಕ್ಷದ ತತ್ವ ಸಿದ್ದಾಂತದ ಮೇಲೆ ಎಲ್ಲಾ ಕಾರ್ಯಕರ್ತರು ಕೆಲಸಮಾಡಬೇಕಿದೆ ಎಂದು ಹೇಳಿದರು.
ವೇದಿಕೆಯಲ್ಲಿ ನೆಟ್ಡಣಿಗೆಮುಡ್ನೂರು ಉಸ್ತುವಾರಿ ಅನಿತಾ ಹೇಮನಾಥ ಶೆಟ್ಟಿ,ನಗರ ಕಾಂಗ್ರೆಸ್ ಅಧ್ಯಕ್ಷರಾದಮಹಮ್ಮದಾಲಿ, ಅಲ್ಪ ಸಂಖ್ಯಾತ ಘಟಕ ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಪ್ರಮುಖರಾದ ಅಮಲ ರಾಮಚಂದ್ರ, ಲಕ್ಷ್ಮೀ ನಾರಾಯಣ ಪಾಣಾಜೆ, ರಾಮ ಕೆ ಮೇನಾಲ, ಪಾಣಾಜೆ ಗ್ರಾಪಂ ಅಧ್ಯಕ್ಷೆ ಮೈಮುನಾ, ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ,ಜೋಕಿಂ ಡಿಸೋಜಾ, ಶಿವನಾಥ ರೈ ಮೇಗಿನಗುತ್ತು ಉಪಸ್ಥಿತರಿದ್ದರು.
ಗ್ರಾಪಂ ಸದಸ್ಯೆ ಚಿತ್ರಾ ಪ್ರಾರ್ಥಿಸಿದರು. ಬ್ಲಾಕ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿದರು.ಕಮಲೇಶ್ ಸರ್ವೆದೊಳಗುತ್ತು ಕಾರ್ಯಕ್ರಮ ನಿರೂಪಿಸಿದರು. ರಾಮಮೇನಾಲ ವಂದಿಸಿದರು.