Published
2 months agoon
By
Akkare Newsಪುತ್ತೂರು : ಪುತ್ತೂರಿನ ಗೌರವಾನ್ವಿತ ಮಾನ್ಯ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಕೆ.ಯಸ್ ರೈ ಎಸ್ಟೇಟ್ ಕೋಡಿಂಬಾಡಿ ಇವರ “ರೈ ಎಸ್ಟೇಟ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತೂರು” ಇದರ ವತಿಯಿಂದ ದಿನಾಂಕ 02-11-2024 ರಂದು ಪುತ್ತೂರು-ಕೊಂಬೆಟ್ಟು, ತಾಲೂಕು ಕ್ರಿಡಾಂಗಣದಲ್ಲಿ ದೀಪಾವಳಿಯ ಪ್ರಯುಕ್ತ ನಡೆಯಲಿರುವ ವಸ್ತ್ರ ವಿತರಣಾ ಮತ್ತು ಟ್ರಸ್ಟ್ ನ ಫಲಾನುಭವಿಗಳ ವಾರ್ಷಿಕ ಸಮಾವೇಶ,ಗೂಡು ದೀಪ ಸ್ಪರ್ಧೆ ಅಶೋಕ ಜನ-ಮನ 2024″ ಕ್ಕೆ ಗ್ರಾಮ ಗ್ರಾಮಗಳಿಗೆ ಭೇಟಿ ನೀಡಿ ಜನರನ್ನು ಆಹ್ವಾನಿಸುವ ಸಲುವಾಗಿ ನಾಳೆ ದಿನಾಂಕ 21-10-2024 ರಂದು ಸಂಜೆ ಗಂಟೆ 5:30ಕ್ಕೆ ಕೋಡಿಂಬಾಡಿ ಗ್ರಾಮದ ಅಶ್ವತ್ಥಕಟ್ಟೆ ವಠಾರದ ಗಣೇಶ ಮೈದಾನ ದಲ್ಲಿ ಮತ್ತು ಬೆಳ್ಳಿಪ್ಪಾಡಿ ಮಾರ್ಷಲ್ ವೇಗಸ್ ಅವರ ಮನೆಯಲ್ಲಿ ಸಂಜೆ ಗಂಟೆ 7.00ಕ್ಕೆ ಗ್ರಾಮಸ್ಥರ ಸಭೆ ನಡೆಯಲಿದೆ.
*ಎಲ್ಲರಿಗೂ ಇದುವೇ ವೈಯಕ್ತಿಕ ಆಮಂತ್ರಣವೆಂದು ಪರಿಗಣಿಸಿ ಆಗಮಿಸಬೇಕಾಗಿ ಕೋರಿಕೆ*ಎಂದು ಸಂಘಟಕರು ತಿಳಿಸಿರುತ್ತಾರೆ.