Published
2 months agoon
By
Akkare Newsಪುತ್ತೂರು : ಪುತ್ತೂರು ಬಸ್ ನಿಲ್ದಾಣದಲ್ಲಿ ಪ್ರಯಾಣಿಕ ಮೂರ್ಛೆರೋಗ ದಿಂದ ಬಸ್ ಸ್ಟ್ಯಾಂಡ್ ನಲ್ಲಿ ಬಿದ್ದು ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದರು ಹೋಂ ಗಾರ್ಡ್ ಕೂಡಲೆ ಧಾವಿಸಿ ಮತ್ತು ಬಸ್ ಸ್ಟ್ಯಾಂಡ್ ನಲ್ಲಿದ್ದ ಪ್ರಯಾಣಿಕರು ಸೇರಿ ಅವರನ್ನು ಕೂಡಲೇ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಕೆಲಸ ಮಾಡಿದರು ಆದರೆ ಯಾವನೇ ಒಬ್ಬ ಬಸ್ ಡ್ರೈವರ್ ಅಥವಾ ನಿರ್ವಾಹಕ ಬಸ್ಸು ನಿಲ್ದಾಣದಲ್ಲಿ ಇದ್ದರೂ ಕೂಡ ನೋಡು ನೋಡದಂತೆ ವರ್ತಿಸಿರುತ್ತಾರೆ .
ಸಂಬಂಧಪಟ್ಟ ಕೆಎಸ್ಆರ್ಟಿಸಿ ಅಧಿಕಾರಿಗಳು ಕೂಡಲೇ ಬಸ್ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವಜಾ ಮಾಡಬೇಕು . ಪ್ರಯಾಣಿಕರಾದ ಸತೀಶ್ ರೈ ಹೊಸ ಮನೆ ಇದರ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿರುತ್ತಾರೆ. ಇನ್ನು ಮುಂದೆ ಇದೇ ರೀತಿ ಅಧಿಕಾರಿಗಳು ವರ್ತಿಸಿದರೆ ಕೆ ಎಸ್ ಆರ್ ಟಿ ಸಿ ಆಫೀಸ್ ಎದುರು ಪ್ರಯಾಣಿಕರನ್ನು ಸೇರಿಸಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಸತೀಶ್ ರೈ ಹೊಸಮನೆ ಅಕ್ಕರೆ ನ್ಯೂಸ್ ಗೆ ತಿಳಿಸಿರುತ್ತಾರೆ.