Published
2 months agoon
By
Akkare Newsನೂತನ ಹೋಟೆಲ್ ಉದ್ಘಾಟನೆ ನೆರವೇರಿಸಿ, ಶುಭ ಹಾರೈಸಿದ ಶಾಸಕ ಅಶೋಕ್ ಕುಮಾರ್ ರೈ … ಸಸ್ಯಾಹಾರಿ ಮಾಂಸಾಹಾರಿ ಪ್ರೇಮಿಗಳಿಗೆ ಸಿಗಲಿದೆ ಬಾಯಲ್ಲಿ ನೀರೂರಿಸುವಂಥ “ಸವಿ -ರುಚಿ” ಖಾದ್ಯಗಳು… ಶುಭ ಕಾರ್ಯಗಳಿಗೂ ಸವಿರುಚಿಯಿಂದ ಸಿಗಲಿದೆ ಕೆಟರಿಂಗ್ ವ್ಯವಸ್ಥೆ…
ಪುತ್ತೂರು : ಹೋಟೆಲ್ ಉದ್ಯಮದಲ್ಲಿ ಸುಮಾರು 20 ವರ್ಷಗಳ ಅನುಭವ ಹೊಂದಿರುವ ಕೋಡಿಂಬಾಡಿ ಶಿವಪ್ರಸಾದ್ ಶೆಟ್ಟಿ ಇವರ ಮಾಲೀಕತ್ವದ ಉತ್ತರ ಭಾರತ ಹಾಗೂ ದಕ್ಷಿಣ ಭಾರತದ ವೈವಿಧ್ಯಮಯ ಶೈಲಿಯ ಎಲ್ಲಾ ಬಗೆಯ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಖಾದ್ಯಗಳನ್ನೊಳಗೊಂಡಿರುವ ಹೋಟೆಲ್ ಸವಿರುಚಿ ಅ.23ರಂದು ಕೃಷ್ಣ ನಗರ ಮುಖ್ಯರಸ್ತೆಯ ದೇವಕೀತನಯ ಸಂಕೀರ್ಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶುಭಾರಂಭಗೊಂಡಿತು.
ನೂತನ ಸಂಸ್ಥೆಯನ್ನು ಶಾಸಕ ಅಶೋಕ್ ಕುಮಾರ್ ರೈ ಅವರು ಉದ್ಘಾಟಿಸಿ, ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಶುಭ ಹಾರೈಸಿದರು. ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ , ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮಾಜಿ ನಗರಸಭಾ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಮಾಲಿಕ ಶಿವ ಪ್ರಸಾದ್ ಶೆಟ್ಟಿಯವರ ಸಹೋದರ, ರೈ ಎಸ್ಟೇಟ್ ಅಂಡ್ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷರಾದ ಸುದೇಶ್ ಶೆಟ್ಟಿ ನಗರಸಭಾ ಸದಸ್ಯ ಸುಂದರ ಪೂಜಾರಿ ಬಡಾವು,ಕೋಡಿಂಬಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್,ಸಾಜ ರಾಧಾಕೃಷ್ಣ ಆಳ್ವ, ಬನ್ನೂರ್ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್,
ಬನ್ನೂರು ಚರ್ಚ್ ಇದರ ಸ್ತ್ರೀ ಸಂಘಟನೆಯ ಅಧ್ಯಕ್ಷೆ ನತಾಲಿಯ ಪಾಯಸ್, ನಿರಂಜನ ರೈ ಮಠಂತಬೆಟ್ಟು, ರಾಮಚಂದ್ರ ಪೂಜಾರಿ ಕೋಡಿಂಬಾಡಿ, ದೇವಕೀತನಯ ಸಂಕೀರ್ಣ ಮಾಲೀಕ ಸೀತಾರಾಮ ಗೌಡ, ಕೋಡಿಂಬಾಡಿ ಮಹಾವಿಷ್ಣು ದೇವಸ್ಥಾನದ ಮೊಕೇಸರ ಯು.ಜಿ.ರಾಧ, ಬಾಲಕೃಷ್ಣ ರೈ ಕುದ್ಮಾಡಿ, ಬನ್ನೂರು ಸೊಸೈಟಿ ನಿರ್ದೇಶಕ ಮೋಹನ್ ಪಕ್ಕಳ ಕುಂಡಾಪು,ಶಿವಪ್ರಸಾದ್ ಶೆಟ್ಟಿ ಅವರ ಮಾತೃಶ್ರೀ ಗಿರಿಜಾ ಶೆಟ್ಟಿ, ಮಾವಂದಿರಾದ ಸಂಜೀವ ಶೆಟ್ಟಿ ಮೊಡಂಕಾಪು, ರಾಮಣ್ಣ ಶೆಟ್ಟಿ ಗುತ್ತಿನ ಮನೆ, ಸಹೋದರಿಯರಾದ ಶಾಲಿನಿ ಶೆಟ್ಟಿ ಹಾಗೂ ಸುಜಾತ ಶೆಟ್ಟಿ, ಅತ್ತಿಗೆ ಶ್ರದ್ಧಶೆಟ್ಟಿ, ವಿಷ್ಟೇಶ್ ಮಡ್ ನ್ ಬ್ಲಾಕ್ ಇದರ ಮಾಲೀಕ ಚಿದಾನಂದ ಶೆಟ್ಟಿ, ಮನೋಜ್ ಶೆಟ್ಟಿ ಪೆರ್ಮಂಕಿ,ಅತ್ತಿಗೆ ಶ್ರದ್ಧಶೆಟ್ಟಿ, ವಿಶ್ಲೇಶ್ ಮಡ್ ನ್ ಬ್ಲಾಕ್ ಇದರ ಮಾಲೀಕ ಚಿದಾನಂದ ಶೆಟ್ಟಿ, ಮನೋಜ್ ಶೆಟ್ಟಿ ಪೆರ್ಮಂಕಿ, ವೈದ್ಯೆ ಅನುಪಮ ಕೃಷ್ಣ ನಗರ, ಮಂಜು ಕೆಮ್ಮಾಯಿ ಸಹಿತ ಹಲವರು ಸಂಸ್ಥೆ ಶ್ರೇಯೋಭಿವೃದ್ಧಿಗೆ ಶುಭಹಾರೈಸಿದರು.
ಸಂಸ್ಥೆಯ ಮಾಲಿಕ ಶಿವಪ್ರಸಾದ್ ಶೆಟ್ಟಿ ಹಾಗೂ ಸೌಮ್ಯ ಶಿವಪ್ರಸಾದ್ ಶೆಟ್ಟಿ ದಂಪತಿ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿ ಸತ್ಕರಿಸಿ,ಬೆಂಬಲ, ಸಹಕಾರ ಯಾಚಿಸಿದರು.