Published
2 months agoon
By
Akkare Newsಪುತ್ತೂರು: ಪುತ್ತೂರು ತಾಲೂಕಿನಲ್ಲಿ ಹೊರ ಜಿಲ್ಲೆಯಿಂದ ಬಂದು ಇಲ್ಲಿ ಕಡಿಮೆ ದರದಲ್ಲಿ ಕೆಲಸ ಮಾಡುವ ಜೆಸಿಬಿ ಮತ್ತು ಲಾರಿಗಳನ್ನು ಪುತ್ತೂರು ಜೆಸಿಬಿ ಯೂನಿಯನ್ ಅವರು ತಡೆದು ನಿಲ್ಲಿಸಿ ಕೆಲಸ ಮಾಡದಂತೆ ತಡೆಯುತ್ತಿದ್ದಾರೆ,ಇದನ್ನು ತಿಳಿದ ಜೆಸಿಬಿ ಮಾಲಕರು ಪುತ್ತೂರು ನಗರ ಠಾಣೆಗೆ ದೂರು ನೀಡಿರುತ್ತಾರೆ,ಸದ್ರಿ ಎರಡು ಕಡೆಯವರನ್ನು ಕರೆದು ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸೌಹಾರ್ದ ರೀತಿಯಲ್ಲಿ ಮಾತುಕತೆ ಮಾಡಿರುತ್ತಾರೆ.
ಪೊಲೀಸ್ ಠಾಣೆಯಿಂದ ನೇರವಾಗಿ ಶಾಸಕರ ಕಚೇರಿಗೆ ಭೇಟಿ ನೀಡಿ, ಜೆಸಿಬಿ ಮಾಲಕರಿಗೆ ಆಗುವ ತೊಂದರೆಯನ್ನು ಶಾಸಕರಲ್ಲಿ ತಿಳಿಸಿ, ಇದಕ್ಕೆ ಕೂಡಲೇ ಪರಿಹಾರವನ್ನು ನೀಡಬೇಕೆಂದು ಶಾಸಕರಲ್ಲಿ ವಿನಂತಿಸಿರುತ್ತಾರೆ.