Published
2 months agoon
By
Akkare Newsಸಂಭ್ರಮದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಭರವಸೆ ನೀಡಿದ ಕಾರ್ಮಿಕ ವರ್ಗ.
ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಸಾರಥ್ಯದ ರೈ ಎಸ್ಟೇಟ್ ಎಜುಕೇಶನ್& ಚಾರಿಟೇಬಲ್ ಟ್ರಸ್ಟ್ ಮತ್ತು ಜನಸೇವಾ ಕೇಂದ್ರ ಪುತ್ತೂರು ಇದರ ವತಿಯಿಂದ
ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 2ರಂದು ಕೊಂಬೆಟ್ಟಿನಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿರುವ ವಸ್ತ್ರ ವಿತರಣೆ ಹಾಗೂ ಗೂಡು ದೀಪ ಸ್ಪರ್ಧೆ
ಅಶೋಕ ಜನ-ಮನ 2024 ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಕೋಡಿಂಬಾಡಿಯ ಅಡಿಕೆ ಫ್ಯಾಕ್ಟರಿ ಕಾರ್ಮಿಕರಿಗೆ ವಿತರಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
ಟ್ರಸ್ಟ್ ಸದಸ್ಯರಾದ ಜಯಪ್ರಕಾಶ್ ಬದಿನಾರು ಮತ್ತು ಶಿವಪ್ರಸಾದ್ ರೈ ಅವರು ಅಡಿಕೆ ಫ್ಯಾಕ್ಟರಿಯ ಮಹಿಳಾ ಕಾರ್ಮಿಕರಿಗೆ ಆಮಂತ್ರಣ ಪತ್ರ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಆಮಂತ್ರಣ ಪತ್ರ ಸ್ವೀಕರಿಸಿದ ಕಾರ್ಮಿಕ ವರ್ಗದವರು ಸಂಭ್ರಮದಿಂದ ನಾವೆಲ್ಲರೂ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ಭರವಸೆ ನೀಡಿದರು.