ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್( ರಿ) ಪುತ್ತೂರು

Published

on

ಉಪ್ಪಿನಂಗಡಿ ವಲಯದ ತಂಡಗಳ ಸಕ್ರಿಯ ಸದಸ್ಯರ ತರಬೇತಿ ಕಾರ್ಯಗಾರ ಉಪ್ಪಿನಂಗಡಿ ಗಾಣಿಗರ ಸಭಾಭವನದಲ್ಲಿ ಪ್ರಗತಿ ಬಂದು ಒಕ್ಕೂಟದ* ವಲಯ್ಯಾಧ್ಯಕ್ಷರಾದ ನಾರಾಯಣ ಕೆಳಗಿನಮನೆ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್ *ಮತ್ತು ಭಜನಾ ಪರಿಷತ್ ತಾಲೂಕು ವೇದಿಕೆ ಅಧ್ಯಕ್ಷರಾದ ಲೋಕೇಶ್ ಬೆತ್ತೋಡಿ ಮತ್ತು 10 ಒಕ್ಕೂಟದ ಅಧ್ಯಕ್ಷರುಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ದೀಪ ಪ್ರಜ್ವಲಿಸುವುದರ ಮೂಲಕ ಉದ್ಘಾಟನೆಗೊಂಡ ಉದ್ಘಾಟಕರ ಮಾತಾದ ನಾರಾಯಣ ಕೆಳಗಿನಮನೆ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು

 

 

ಅದರಂತೆ ಭಜನಾ ಪರಿಷತ್ ಅಧ್ಯಕ್ಷರಾದ ಲೋಕೇಶ್ ಬೆತ್ತೋಡಿ ಅವರು ಶುಭ ಹಾರೈಸಿದರು ನಂತರ ಜಿಲ್ಲಾ ನಿರ್ದೇಶಕರಾದಂತಹ ಪ್ರವೀಣ್ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳೆದು ಬಂದ ರೀತಿಯನ್ನು ಪ್ರಾಸ್ತಾವಿಕ ಮಾತನಾಡಿ ತರಬೇತಿಯನ್ನು ಮಾತಿನೊಂದಿಗೆ ಪ್ರಾರಂಭಿಸಿ ,ಸಂಘ ರಚನೆ, ವಾರದ ಸಭೆ ಮಾಡುವ ವಿಧಾನ ಒಕ್ಕೂಟ ರಚನೆ, ಒಕ್ಕೂಟ ಸಭೆ ಮಾಡುವ ವಿಧಾನ ಒಕ್ಕೂಟದ ಪದಾಧಿಕಾರಿಗಳ ಜವಾಬ್ದಾರಿ, ಸಾಲ ವಿತರಣೆ, ಸಾಲ ವಿತರಣೆ ಉದ್ದೇಶ, ವಿಧಿಸುವ ಬಡ್ಡಿ ಸಾಲ ವಿತರಣೆ ಜವಾಬ್ದಾರಿ, ತಂಡ ಮತ್ತು ಬ್ಯಾಂಕಿಗೆ ಇರುವಂತಹ ವಿಚಾರದ ಬಗ್ಗೆ ವಿಶ್ಲೇಷಣೆ ಮಾಡಿ. ಯೋಜನೆಯಿಂದ ದೊರೆಯುವ ಸೌಲಭ್ಯ ಈ ಮುಂತಾದ ಮಾಹಿತಿಯನ್ನು ಭಾಗವಹಿಸಿದ ಸಂಘದ ಸದಸ್ಯರಲ್ಲಿ ಪ್ರಶ್ನೆ ಮಾಡುವ ಮೂಲಕ ಹುರಿದುಂಬಿಸಿ ಅತ್ಯುತ್ತಮವಾದ ಮಾಹಿತಿ ಮಾರ್ಗದರ್ಶನವನ್ನು ಬಹಳ ಆಕರ್ಷಣೀಯ ರೀತಿಯಲ್ಲಿ ಸದಸ್ಯರಿಗೆ ಮನಮುಟ್ಟುವಂತೆ ನೀಡಿದರು ನಂತರ ತಾಲೂಕಿನ ಯೋಜನಾಧಿಕಾರಿಯವರಾದಂತಹ ಶಶಿಧರ್ ಸರ್ ತಂಡದ ನಿರ್ವಹಣೆಯ ಬಗ್ಗೆ, ವಿಮರ್ಶಿಸುತ್ತಾ, ತಂಡದ ಮಾಸಿಕ ವರದಿಯ ಬಗ್ಗೆ ವಿಶ್ಲೇಷಣೆ ಮಾಡಿ ಮಾಹಿತಿ ನೀಡಿದರು ಅದರಂತೆ ಯೋಜನೆ ಮೂಲಕ ನೀಡಿದ ಸೌಲಭ್ಯದ ಅಂಕಿ ಅಂಶವನ್ನು ಸಭೆಗೆ ತಿಳಿಸಿದರು ,

 

 

ನಂತರ ಜಿಲ್ಲಾ ನೋಡಲ್ ಅಧಿಕಾರಿ ಶ್ರೀ ರಾಮ್*ಇವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ವಿವಿಧ ವಿಮೆಯ ಬಗ್ಗೆ ಪ್ರಸ್ತಾಪಿಸಿ ಮಾಹಿತಿ ನೀಡಿದರು, ನಂತರ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ *ವಳಾ ಲು ಒಕ್ಕೂಟದ ಅಧ್ಯಕ್ಷರಾದ ಮಹೇಂದ್ರವರ್ಮರವರು ನಾವು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಫಲಾನುಭವಿಗಳು ನಾವು ಯಾವತ್ತು ಇಂತಹ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಬೇಕು ನಮಗೆ ನೆಮ್ಮದಿಯ ಬದುಕನ್ನು ಕಟ್ಟಿ ಕೊಟ್ಟ ಯೋಜನೆಯನ್ನು ನಾವು ಕೈ ಬಿಡಬಾರದು ಎಂಬ ಮೆಚ್ಚುಗೆ ವ್ಯಕ್ತಪಡಿಸಿದರು.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement