Published
2 months agoon
By
Akkare Newsಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಸಾರ್ವಜನಿಕ ಬಸ್ ನಿಲ್ದಾಣದ ಸ್ವಚ್ಛತಾ ಕಾರ್ಯವು ದಿನಾಂಕ 26-10-2024ರ ಶನಿವಾರದಂದು ನಡೆಯಿತು.
ನಾಲ್ಕು ವರ್ಷಗಳ ಹಿಂದೆ ಮಿತ್ತೂರು ಪೇಟೆಯಲ್ಲಿ ಘಟಕದ ವತಿಯಿಂದ ನಿರ್ಮಿಸಲಾಗಿದ್ದ ಸಾರ್ವಜನಿಕ ಬಸ್ ತಂಗುದಾಣದ ಸ್ವಚ್ಛತಾ ಕಾರ್ಯವನ್ನು ಘಟಕದ ಸದಸ್ಯರುಗಳೇ ತಮ್ಮ ವಾರ್ಷಿಕ ನಿರ್ವಹಣೆಯ ಕಾರ್ಯಭಾಗವಾಗಿ ನಡೆಸಿಕೊಂಡು ಬರುತ್ತಿದ್ದು, ಆ ನಿಟ್ಟಿನಲ್ಲಿ ಸದ್ರಿ ಬಸ್ ತಂಗುದಾಣದ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.
ಇಡ್ಕಿದು ಗಾಮಪಂಚಾಯತ್ ನ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಅನುಮತಿಯೊಂದಿಗೆ ನಡೆದ ಈ ಸ್ವಚ್ಛತಾ ಕಾರ್ಯದಲ್ಲಿ ಘಟಕದ ಈಗಿನ ಅಧ್ಯಕ್ಷರಾದ ನಾಗೇಶ್ ಕೊಂಕಣಪದವು, ಮಾಜಿ ಅಧ್ಯಕ್ಷರುಗಳಾದ ಹರೀಶ್ ಬಾಕಿಲ, ಪ್ರಶಾಂತ್ ಅನಂತಾಡಿ, ರವಿಚಂದ್ರ ಬಾಬನಕಟ್ಟೆ, ಕಾರ್ಯದರ್ಶಿ ಶಾಲಿನಿ ಜಗದೀಶ್ ಕುದ್ರೆಬೆಟ್ಟು, ಮಾಜಿ ಕಾರ್ಯದರ್ಶಿ ರಾಜೇಶ್ ಬಲ್ಯ, ನಿರ್ದೇಶಕರುಗಳಾದ ರಾಜೇಶ್ ಕೋಟ್ಯಾನ್, ಸತೀಶ್ ಮುರುವ, ಪುಷ್ಪಶ್ರೀ ನಾಗೇಶ್ ಪಾಲ್ಗೊಂಡಿದ್ದರು.