Published
2 months agoon
By
Akkare Newsಗೇರುಬೀಜ ನೆಡುತೋಪು ಗುಡ್ಡದಲ್ಲಿ ನಡೆಯುತ್ತಿದ್ದ ಅಕ್ರಮ ಕೋಳಿ ಅಂಕಕ್ಕೆ ಪೊಲೀಸರು ದಾಳಿ ಮಾಡಿ ಐವರನ್ನು ವಶಕ್ಕೆ ಪಡೆದಿರುವ ಘಟನೆ ಒಳಮೊಗ್ರು ಗ್ರಾಮದಿಂದ ವರದಿಯಾಗಿದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಒಳಮೊಗ್ರು ಗ್ರಾಮದ ಕುಟೀನೋಪಿನಡ್ಕ ಎಂಬಲ್ಲಿನ ಗೇರುಬೀಜ ನೆಡುತೋಪು ಗುಡ್ಡದಲ್ಲಿ ಈ ಅಕ್ರಮ ಕೋಳಿ ಅಂಕ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿ, ಸಿಬ್ಬಂದಿಯವರು ಅ.28 ರಂದು ದಾಳಿ ನಡೆಸಿರುವುದಾಗಿ ಮಾಹಿತಿ ಲಭಿಸಿದೆ.
ದಾಳಿ ನಡೆಸಿದ ಸಂದರ್ಭದಲ್ಲಿ ಕೋಳಿ ಅಂಕಕ್ಕೆ ಬಳಸಿದ 5 ಕೋಳಿ ಮತ್ತು ರೂ.7710 ಹಾಗೂ ಐವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.