Published
2 months agoon
By
Akkare Newsಪುತ್ತೂರು: ಪುತ್ತೂರಿನಿಂದ ಮುಂಡೂರು ಮಾರ್ಗವಾಗಿ ತಿಂಗಳಾಡಿಗೆ ತೆರಳುವ ಕೆಎಸ್‌ಆರ್‌ಟಿಸಿ ಬಸ್ ಅಗತ್ಯವಿರುವಲ್ಲಿ ನಿಲುಗಡೆ ಮಾಡದೆ ಇರುವ ಕಾರಣ ಈ ರೂಟ್‌ನಲ್ಲಿ ಬಸ್ ಇದ್ದರೂ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಕಲ್ಲಗುಡ್ಡೆಯ ಕಾಂಗ್ರೆಸ್ ಮುಖಂಡರಾದ ಚಂದ್ರಶೇಖರ ಕಲ್ಲಗುಡ್ಡೆಯವರು ಕೆಎಸ್‌ಆರ್‌ಟಿಸಿ ಅಧಿಕಾರಿಗೆ ದೂರು ನೀಡಿದ್ದಾರೆ.,
ಪ್ರತೀ ದಿನ ಬೆಳಿಗ್ಗೆ ಮುಂಡೂರು ಮಾರ್ಗವಾಗಿ ತಿಂಗಳಾಡಿಗೆ ಬಳಿಕ ತಿಂಗಳಾಡಿಯಿಂದ ಮುಂಡೂರು ಮಾರ್ಗವಾಗಿ ಸರಕರಿ ಬಸ್ ಸಂಚಾರ ಇದೆ. ಈ ಬಸ್ಸು ಕಲ್ಲಗುಡ್ಡೆ, ನೈತಾಡಿ ಮತ್ತು ಪಂಜಳದಲ್ಲಿ ನಿಲುಗಡೆಯಿಲ್ಲ. ಈ ಭಾಗದ ವಿದ್ಯಾರ್ಥಿಗಳು ಬಸ್ಸು ಇದ್ದರೂ ಅದರಲ್ಲಿ ಪ್ರಯಾಣ ಮಾಡುವ ಯೋಗವಿಲ್ಲ ಎಂಬಂತಾಗಿದೆ. ಬೆಳಿಗ್ಗೆ 8.15 ,8.45 ಮತ್ತು 9.30ಕ್ಕೆ ಒಟ್ಟು ಮೂರು ಬಸ್ ಸಂಚಾರವಿದೆ. ಈ ಪೈಕಿ ಶಾಲಾ ಸಮಯದಲ್ಲಿ ಹೊರಡುವ ಎರಡೂ ಬಸ್ಸುಗಳು ಮೂರು ಕಡೆಗಳಲ್ಲಿ ನಿಲುಗಡೆಯಾಗದೇ ಇರುವ ತೀವ್ರ ತೊಂದರೆಯಾಗಿದೆ.
ಈ ಸಮಸ್ಯೆಯನ್ನು ತಕ್ಷಣ ಪರಿಹರಿಸಿ ಕಲ್ಲಗುಡ್ಡೆ, ನೈತಾಡಿ ಮತ್ತು ಪಂಜಳದಲ್ಲಿ ಸರಕಾರಿ ಬಸ್ಸನ್ನು ನಿಲುಗಡೆ ಮಾಡಬೇಕೆಂದು ಅದಿಕಾರಿಗೆ ಮನವಿ ಮಾಡಿದ್ದಾರೆ.
ಭರವಸೆ: ನೈತಾಡಿ ಮತ್ತು ಪಂಜಳದಲ್ಲಿ ಬಸ್ಸು ನಿಲ್ಲಿಸದೇ ಇರುವುದೇ ದೊಡ್ಡ ಸಮಸ್ಯೆಯಾಗಿದೆ, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಇದರಿಂದ ತೀವ್ರ ತೊಂದರೆಯಾಗಿದೆ, ಈ ಬಗ್ಗೆ ಶಾಸಕ ಅಶೋಕ್ ರೈ ಅವರ ಸೂಚನೆಯಂತೆ ಅಧಿಕಾರಿಗೆ ಮನವಿ ಮಾಡಿದ್ದೇನೆ, ನಾಳೆಯಿಂದಲೇ ವ್ಯವಸ್ಥೆ ಮಾಡಿಸುವುದಾಗಿ ತಿಳಿಸಿದ್ದಾರೆ ಎಂದು ಚಂದ್ರಶೇಖರ ಕಲ್ಲಗುಡ್ಡೆ ಪ್ರತಿಕ್ರಿಯೆ ನೀಡಿದ್ದಾರೆ.