Published
7 days agoon
By
Akkare Newsಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಸಿಕ್ಕಿದೆ . ದರ್ಶನ್ ಬಳ್ಳಾರಿ ಜೈಲಿನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿನ ಹೊಸಕೆರೆಹಳ್ಳಿಯ ವಿಜಯಲಕ್ಷ್ಮಿ ನಿವಾಸಕ್ಕೆ ದರ್ಶನ್ ಆಗಮಿಸಿದ್ದಾರೆ. ದರ್ಶನ್ ಆಗಮನ ಹಿನ್ನೆಲೆಯಲ್ಲಿ ಮನೆ ಬಳಿ ಅಭಿಮಾನಿಗಳ ಜಮಾಯಿಸಿ ದರ್ಶನ್ ದರ್ಶನ್ ಎಂದು ಘೋಷಣೆ ಕೂಗಿದ್ದಾರೆ. ಅಭಿಮಾನಿಗಳನ್ನ ನಿಯಂತ್ರಿಸಲು ಸೆಕ್ಯೂರಿಟಿ ಗಾರ್ಡ್ ಗಳು ಹಾಗೂ ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ನಿವಾಸದ ಬಳಿ ಭಾರೀ ಭದ್ರತೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಷರತ್ತುಬದ್ಧ ಮಧ್ಯಂತರ ಜಾಮೀನು ಸಿಕ್ಕಿದ ಬೆನ್ನಲ್ಲೇ ಆರ್.ಆರ್.ನಗರ ದರ್ಶನ್ ನಿವಾಸಕ್ಕೆ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ದರ್ಶನ್ ಮನೆ ಸಂಪರ್ಕಿಸುವ ರಸ್ತೆಗೆ ಬ್ಯಾರಿಕೇಡ್ ಹಾಕಿ ಮೂವರು ಪಿಎಸ್‌ಐ ನೇತೃತ್ವದಲ್ಲಿ ಮನೆ ಬಳಿ ಭದ್ರತೆ ನೀಡಲಾಗಿದೆ. ಪ್ಯಾನ್ಸ್ ಹುಚ್ಚಾಟ ತಡೆಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಇನ್ನು, ರಾತ್ರಿ ಮನೆಗೆ ಬಂದ ದರ್ಶನ್ ಊಟ ಮಾಡಿದ ಬಳಿಕ ನಿದ್ದೆಗೆ ಜಾರಿದ್ದು, ಇಂದು ಮಧ್ಯಾಹ್ನದ ಬಳಿಕ ಆಸ್ಪತ್ರೆಗೆ ತೆರಳುವ ಸಾಧ್ಯತೆ ಇದೆ. ಬೆಂಗಳೂರಿನ ಮಣಿಪಾಲ್, ಸ್ಪರ್ಶ್ ಅಥವಾ ಅಪೋಲೋ ಆಸ್ಪತ್ರೆಗಳಲ್ಲಿ ಒಂದು ಆಸ್ಪತ್ರೆಗೆ ದರ್ಶನ್ ದಾಖಲಾಗುವ ಸಾಧ್ಯತೆ ಇದೆ.
ಅಭಿಮಾನಿಗಳಿಗೆ ವಿನೀಶ್ ಮನವಿ
ಇನ್ನು, ಬೆಂಗಳೂರಿನ ಹೊಸಕೆರೆಹಳ್ಳಿಯ ವಿಜಯಲಕ್ಷ್ಮಿ ನಿವಾಸಕ್ಕೆ ದರ್ಶನ್ ಆಗಮಿಸಿದ್ದು, ಅವರನ್ನ ನೋಡಲು ಅಭಿಮಾನಿಗಳು ಜಮಾಯಿಸ್ತಿದ್ದರು. ಇಂದು ದರ್ಶನ್ ಮಗ ವಿನೀಶ್ ಹುಟ್ಟುಹಬ್ಬ ಈ ಹಿನ್ನೆಲೆ ವಿನೀಶ್ ಅಪಾರ್ಟ್‌ಮೆಂಟ್‌ನಿಂದ ಹೊರ ಬಂದು ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಜನರಿಗೆ ಕೈ ಮುಗಿದು ಎಲ್ಲರೂ ಇಲ್ಲಿಂದ ತೆರಳಿ, ಕೋರ್ಟ್‌ನಿಂದ ಆದೇಶ ಇದೆ ಅಂತಾ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಿದೆ, ಈ ಬಗ್ಗೆ ಬಳ್ಳಾರಿಯ ಕನಕದುರ್ಗಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಮರಿಸ್ವಾಮಿ ನ್ಯೂಸ್18ಗೆ ಪ್ರತಿಕ್ರಿಯೆ ನೀಡಿದ್ದಾರೆ. ತಾಯಿ ಕನಕದುರ್ಗಮ್ಮ ದರ್ಶನ್‌ಗೆ ವರ ನೀಡಿದ್ದಾಳೆ. ವಿಜಯಲಕ್ಷ್ಮಿ ಬಂದಾಗಲೆಲ್ಲಾ ದೇವಸ್ಥಾನಕ್ಕೆ ಬಂದು ಕಣ್ಣೀರಾಕುತ್ತಾ ಧ್ಯಾನಶಕ್ತಳಾಗಿ ವರ ಕೇಳುತ್ತಿದ್ದರು. ಈಗ ಆನಂದದಿಂದ ಪೂಜೆ ಮಾಡಿಸಿದ್ದಾರೆಂದು ಮರಿಸ್ವಾಮಿ ಹೇಳಿದ್ದಾರೆ.