Published
2 months agoon
By
Akkare News
ಪುತ್ತೂರು: ನಾಳೆ (ನ.02)ರಂದು ಇಲ್ಲಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ನಡೆಯಲಿರುವ ರೈ ಎಸ್ಟೇಟ್ ಮತ್ತು ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಪುತ್ತೂರಿನ ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ಅಶೋಕ ಜನಮನ ವಸ್ತ್ರ ವಿತರಣಾ ಹಾಗೂ ಗೂಡು ದೀಪ ಕಾರ್ಯಕ್ರಮ ಅಶೋಕ ಜನ-ಮನ ವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಸುಮಾರು 50,000 ರಿಂದ 75,000 ಜನ ಸೇರುವ ನಿರೀಕ್ಷೆ ಇದ್ದು, ಸದ್ರಿ ಸಮಯ ಪುತ್ತೂರು ಪೇಟೆಯಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಮಯೂರ ಜಂಕ್ಷನ್ನಿಂದ ಕೊಂಬೆಟ್ಟು ಮಾರ್ಗವಾಗಿ ಬೊಳುವಾರು ಕಡೆಗೆ ಹಾದು ಹೋಗುವ ರಸ್ತೆಯನ್ನು ಮತ್ತು ಮಹಾಲಿಂಗೇಶ್ವರ ದೇವಸ್ಥಾನದ ರಸ್ತೆಯನ್ನು ದಿನಾಂಕ: 02.11.2024 ರಂದು ಬೆಳಿಗ್ಗೆ. 07:00 ಗಂಟೆಯಿಂದ ಸಂಜೆ 06.00 ಗಂಟೆಯವರೆಗೆ ಮಯೂರ ಜಂಕ್ಷನ್ ನಿಂದ ಬೊಳುವಾರು ಆಂಜನೇಯ ದೇವಸ್ಥಾನದ ಕಡೆಗೆ ಸಂಚರಿಸಲು ಏಕಮುಖ ರಸ್ತೆ ಹಾಗೂ ಮಹಾಲಿಂಗೇಶ್ವರ ದೇವಸ್ಥಾನ ರಸ್ತೆಯನ್ನು ಮುಖ್ಯ ರಸ್ತೆಯಿಂದ ದೇವಸ್ಥಾನದ ಕಡೆಗೆ ಸಂಚರಿಸಲು ಏಕಮುಖ ರಸ್ತೆಯನ್ನಾಗಿಸಲು ಸೂಕ್ತ ಆದೇಶ ಹೊರಡಿಸುವಂತೆ ಉಲ್ಲೇಖದಂತೆ ಉಪವಿಭಾಗಾಧಿಕಾರಿಗಳು, ಪುತ್ತೂರು ಉಪವಿಭಾಗ, ಪುತ್ತೂರು ಇವರು ಪ್ರಸ್ತಾವನೆಯನ್ನು ಸಲ್ಲಿಸಿರುವ ಮೇರೆಗೆ ಸದರಿ ಪ್ರಸ್ತಾವನೆಯನ್ನು ಅವಲೋಕಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಎಂ.ಪಿ ಈ ರೀತಿಯಾಗಿ ಸಂಚಾರ ಮಾರ್ಗ ಬದಲಾವಣೆ ಮಾಡಿ ಆದೇಶ ನೀಡಿದ್ದಾರೆ.
.