Published
2 months agoon
By
Akkare Newsಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಅವರು ಇಷ್ಟು ಎತ್ತರಕ್ಕೆ ಬೆಳೆದದ್ದು ಯಾರನ್ನು ದ್ವೇಷಿಸಿ ಅಲ್ಲ, ದ್ವೇಷ ಭಾಷಣ ಮಾಡಿಯೂ ಅಲ್ಲ, ಅವರು ಹಿಂದಿನ ಪಕ್ಷದಲ್ಲಿದ್ದಾಗಲೂ ಯಾರನ್ನು ದ್ವೇಷಿಸುತ್ತಿರಲಿಲ್ಲ, ಬಡವರ ಪರವಾಗಿ ಕಾಳಜಿ ವಹಿಸಿದ ಕಾರಣಕ್ಕೆ ಅವರು ಇಂದು ಈ ಸ್ಥಾನದಲ್ಲಿದ್ದಾರೆ. ಅಶೋಕ್ ರೈ ಮುಂದಕ್ಕೂ ಶಾಸಕರಾಗ್ತಾರೆ, ಇನ್ನೂ 10-25 ವರ್ಷ ಪುತ್ತೂರಿನಲ್ಲಿ ಅವರದೇ ಸಾಮ್ರಾಜ್ಯ ಎಂದು ಧಾರ್ಮಿಕ ಮುಖಂಡ ಎಸ್ ಬಿ ಮಹಮ್ಮದ್ ದಾರಿಮಿ ಹೇಳಿದರು.
ರೈ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ವತಿಯಿಂದ ನ.2ರಂದು ಪುತ್ತೂರು ಕೊಂಬೆಟ್ಟು ಮೈದಾನದಲ್ಲಿ ನಡೆದ ಬೃಹತ್ ವಸ್ತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
.ಅಶೋಕ್ ರೈ ಅವರು ತನ್ನ ತಾಯಿಯನ್ನು ಬಹಳವಾಗಿ ಪ್ರೀತಿಸುತ್ತಾರೆ. ಅನ್ನದಾನಕ್ಕೆ ಮಹತ್ವ ಕೊಡುತ್ತಾರೆ, ಅನ್ನವನ್ನು ವೇಸ್ಟ್ ಮಾಡಲು ಬಿಡುವುದಿಲ್ಲ ಎಂದ ಅವರು ದೇವರು ಕೊಟ್ಟ ಸಂಪತ್ತಿನಲ್ಲಿ ಅಲ್ಪ ಪಾಲನ್ನು ಸಮಾಜಕ್ಕೆ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ನಮ್ಮ ದೇಶ ಎಲ್ಲ ಸಂಸ್ಕೃತಿಗಳ ತವರೂರು, ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಮುಖ್ಯ. ಇಲ್ಲದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ ಎಂದರು.