Published
2 months agoon
By
Akkare Newsನವೆಂಬರ್-02. ರಾಜ್ಯ ಸರಕಾರವು ಈಗಾಗಲೇ ತೆರವಾಗಿರುವ ಗ್ರಾಮ ಪಂಚಾಯತ್ ಸದಸ್ಯರ ಸ್ಥಾನಕ್ಕೆ ರಾಜ್ಯಾದ್ಯಂತ ಉಪಚುನಾವಣೆ ಘೋಷಣೆ ಮಾಡಿರುವುದರಿಂದ ಪುತ್ತೂರು ಕ್ಷೇತ್ರ ವ್ಯಾಪ್ತಿಯ ಕೆದಂಬಾಡಿ ಗ್ರಾಮ ಪಂಚಾಯತಿನಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷವು ಸ್ಪರ್ಧಿಸುವುದಾಗಿ ತೀರ್ಮಾನಿಸಿದ್ದು, ಅದರ ಭಾಗವಾಗಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಕ್ ಕೆ.ಎ ರವರ ಅಧ್ಯಕ್ಷತೆಯಲ್ಲಿ ಚುನಾವಣಾ ಪೂರ್ವಭಾವಿ ಸಭೆಯು ಪಕ್ಷದ ಕಚೇರಿಯಲ್ಲಿ ನಡೆಯಿತು.
ಈ ಸಭೆಯಲ್ಲಿ ರಫೀಕ್ ನಂಜೆ ಅವರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಲಾಯಿತು. ಈ ಸಭೆಗೆ ವೀಕ್ಷಕರಾಗಿ ಬಂಟ್ವಾಳ ಪುರಸಭೆಯ ಉಪಾದ್ಯಕ್ಷರು, ಪಕ್ಷದ ಜಿಲ್ಲಾ ಚುನಾವಣಾ ಉಸ್ತುವಾರಿಯೂ ಆದ ಮೂನಿಷ್ ಅಲಿ ಹಾಗೂ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾಗಿರುವ ನವಾಝ್ ಕಟ್ಟೆ ರವರು ಆಗಮಿಸಿದ್ದರು.
ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಉಸ್ಮಾನ್ ಏ.ಕೆ ಸ್ವಾಗತಿಸಿ ಜೊತೆ ಕಾರ್ಯದರ್ಶಿ ರಹೀಂ ಪುತ್ತೂರು ರವರು ಧನ್ಯವಾದ ಅರ್ಪಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮಿತಿಯ ಚುನಾವಣಾ ಉಸ್ತುವಾರಿ ಜುನೈದ್ ಸಾಲ್ಮರ, ಅಭ್ಯರ್ಥಿ ರಫೀಕ್ ನಂಜೆ, ಕುಂಬ್ರ ಬ್ಲಾಕ್ ಕಾರ್ಯದರ್ಶಿ ಇರ್ಷಾದ್ ಜಾರತ್ತಾರು, ರಝಾಕ್, ಹಮೀದ್ ಉಪಸ್ಥಿತರಿದ್ದರು..