Published
2 months agoon
By
Akkare Newsಪುತ್ತೂರು: ನಾನು ಕಳೆದ 40 ವರ್ಷಗಳಿಂದ ಕುಡಿಯುವ ನೀರಿನಸಂಪರ್ಕಕ್ಕೆ ಆರ್ಯಾಪು ಗ್ರಾಪಂಗೆ ಮನವಿಮಾಡುತ್ತಿದ್ದರೂ ಕುಡಿಯುವ ನೀರಿನ ಸಂಪರ್ಕ ಕೊಟ್ಟಿಲ್ಲ ಎಂದು ಗ್ರಾಮದ ಪುಂಡಿಕಾಯಿ ನಿವಾಸಿ ಅಪ್ಪಿ ಎಂಬವರು ಶಾಸಕರಿಗೆ ದೂರು ನೀಡಿದ್ದಾರೆ.
ನಾವು ಪುಂಡಿಕಾಯಿಯಲ್ಲಿಮನೆ ಯಲ್ಲಿಕಳೆದ 40 ,ವರ್ಷಗಳಿಂದ ವಾಸ ಮಾಡುತ್ತಿದ್ದೇವೆ, ನಮಗೆ ಕುಡಿಯುವ ನೀರಿಗೆ ಯಾವುದೇ ಆಧಾರವಿಲ್ಲ. ಬಾವಿಯೂ ಇಲ್ಲ. ಪಕ್ಕದಮನೆಯಿಂದ ಕುಡಿಯಲುನೀರು ತರುತ್ತಿದ್ದೇನೆ,ಮಳೆಗಾಲದಲ್ಲಿಮಳೆಯನೀರನ್ನೇ ಕುಡಿಯುತ್ತಿದ್ದೇನೆ. ನಾನು ಮನೆಯಲ್ಲಿ ಏಕಾಂಗಿಯಾಗಿದ್ದುಮನೆಗೆ ವಿದ್ಯುತ್ ಸಂಪರ್ಕವೂ ಇಲ್ಲಎಂದು ಶಾಸಕರಲ್ಲಿದೂರುನೀಡಿದ್ದಾರೆ.
ನೀರಿನವ್ಯವಸ್ಥೆಗೆ ಶಾಸಕರ ಸೂಚನೆ
ಅಪ್ಪಿ ಅವರಮನೆಗೆ ನೀರುಮತ್ತು ವಿದ್ಯುತ್ ಸಂಪರ್ಕವನ್ನು ಕಲ್ಪಿಸುವಂತೆ ಗ್ರಾಪಂ ಗೆ ಸೂಚನೆನೀಡಿದ್ದಾರೆ. ಪುಂಡಿಕಾಯಿ ಆರ್ಯಾಪು ಮತ್ತು ಒಳಮೊಗ್ರು ಗ್ರಾಮದ ಗಡಿಯಲ್ಲಿದ್ದು ಎರಡೂ ಗ್ರಾಪಂ ಪಿಡಿಒಗಳು ಈ ವಿಚಾರದಲ್ಲಿಮುತುವರ್ಜಿವಹಿಸಿ ನೀರಿನ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದ್ದು,ವಿದ್ಯುತ್ ಸಂಪರ್ಕ ನೀಡುವಂತೆ ಮೆಸ್ಕಾಂಗೂ ಶಾಸಕರುಸೂಚನೆ ನೀಡಿದ್ದಾರೆ.