Published
1 month agoon
By
Akkare Newsಬಂಟ್ವಾಳ : ನಾರಾಯಣ ಗುರುಗಳು ಎಲ್ಲಾ ಹಿಂದುಳಿದ ವರ್ಗದವರಿಗೆ ಧೈರ್ಯ ತುಂಬಿ ಈ ಭೂಮಿಯಲ್ಲಿ ಸಮಾನತೆಯ ಬದುಕನ್ನು ಕಟ್ಟಿಕೊಳ್ಳಲು ಮಾಡಿದ ಕ್ರಾಂತಿಯಿಂದಾಗಿ ಇಂದು ಎಲ್ಲಾ ಹಿಂದುಳಿದ ಮಧ್ಯಮ ವರ್ಗದ ಜನರು ಮುನ್ನಡೆಯುವಂತಾಗಿದೆ ಎಂದು ಯುವವಾಹಿನಿ ಬಂಟ್ಟಾಳ ಘಟಕದ ಮಾಜಿ ಅಧ್ಯಕ್ಷರಾದ ಗಣೇಶ್ ಪೂಂಜರೆಕೋಡಿ ತಿಳಿಸಿದರು.
ಅವರು ದಿನಾಂಕ 7/11/24 ರಂದು ಸುಲತ ಬಿ.ಸಿ ರೋಡ್ ಇವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 19 ರಲ್ಲಿ ಗುರುಸಂದೇಶ ನೀಡಿ ಮಾತನಾಡಿದರು .
ಈ ಸಂದರ್ಭದಲ್ಲಿ ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ , ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ,ನಿರ್ದೇಶಕರಾದ ಮಹೇಶ್ ಬೊಳ್ಳಾಯಿ,ಧನುಷ್ ಮಧ್ವ, ಉದಯ್ ಮೆನಾಡ್,ಗೀತಾ ಜಗದೀಶ್, ನಿಕಟಪೂರ್ವ ಅಧ್ಯಕ್ಷರಾದ ಹರೀಶ್ ಕುದನೆ,ಮಾಜಿ ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೋಡಿ, ಪ್ರೇಮನಾಥ್ ಕರ್ಕೇರ, ಶಿವಾನಂದ ಎಂ, ರಾಜೇಶ್ ಸುವರ್ಣ, ಅರುಣ್ ಬಿ.ಸಿ ರೋಡ್,ಸದಸ್ಯರಾದ, ನಾಗೇಶ್ ಏಲಬೆ, ಸೂರಜ್ ತುಂಬೆ, ಹರೀಶ್ ಅಜೆಕಲಾ, ವಿಘ್ನೇಶ್ ಬೊಳ್ಳಾಯಿ, ಯಶೋಧರ ಕಡಂಬಲ್ಕೆ,ನಯನಾ ಪಚ್ಚಿನಡ್ಕ, ತೃಪ್ತಿ ಪಚ್ಚಿನಡ್ಕ, ಸುದೀಪ್ ರಾಯಿ, ಸಂದೀಪ್ ಬೊಳ್ಳಾಯಿ, ಅರ್ಜುನ್ ಅರಳ, ಯತೀಶ್ ಬೊಳ್ಳಾಯಿ, ಮತ್ತಿತರರು ಉಪಸ್ಥಿತರಿದ್ದರು