Published
1 month agoon
By
Akkare Newsಪುತ್ತೂರು: ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ನೇಮೋತ್ಸವದ ಮತ್ತು ಕಾರ್ಜಾಲು ಗುತ್ತು ದೊಂಪದಬಲಿ ನೇಮೋತ್ಸವದಲ್ಲಿ ಶಂಖ ಮತ್ತು ಜಾಗಟೆಯ ಚಾಕ್ರಿಯನ್ನು ನೆರವೇರಿಸುತ್ತಿದ್ದ ಹಿರಿಯ ಕಾರ್ಯಕರ್ತ ದೇವಪ್ಪ ದಾಸಯ್ಯ ಅವರು ನ.8ರಂದು ನಿಧನರಾದರು.
ಪುತ್ತೂರು ಸಿಟಿ ಗುಡ್ಡೆ ನಿವಾಸಿಯಾಗಿದ್ದು, ಪ್ರಸ್ತುತ ಪಂಜಳದಲ್ಲಿ ವಾಸ್ತವ್ಯ ಹೊಂದಿದ್ದ ಅವರು ಕಾಂಗ್ರೆಸ್ ಸಕ್ರೀಯ ಕಾರ್ಯಕರ್ತರಾಗಿದ್ದರು. ಸತ್ಯನಾರಾಯಣ ಪೂಜಾ ಸಮಿತಿ ಮತ್ತು ಕಲ್ಲೇಗ ಕಲ್ಕುಡ ಕಲ್ಲುರ್ಟಿ ದೈವಸ್ಥಾನ, ಕಾರ್ಜಾಲು ದೊಂಪದ ಬಲಿ ನೇಮೋತ್ಸವದಲ್ಲಿ ದೈವ ಚಾಕ್ರಿಯಲ್ಲಿ ಸಕ್ರೀಯರಾಗಿದ್ದರು. ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.