Published
1 month agoon
By
Akkare Newsಪುತ್ತೂರು , ನ.10 ರಂದು ಕೋಟತಟ್ಟುವಿನಲ್ಲಿ ನಡೆದ,ಡಾ ಶಿವರಾಮಕಾರಂತ ಜನ್ಮ ದಿನಾಚರಣೆ ಅಂಗವಾಗಿ ನಡೆಯುವ ಕಾಯಕ್ರಮದಲ್ಲಿ ಮೇಘಾಲಯದ ರಾಜ್ಯಪಾಲ ಶ್ರೀ ವಿಜಯ ಶಂಕರ್ ಇವರು ಕೋಡಿಂಬಾಡಿ ಗ್ರಾಮ ಪಂಚಾಯತ್ಗೆ ಪ್ರಶಸ್ತಿ ಪ್ರಧಾನ ಮಾಡಿದರು.
ತೆರಿಗೆ ವಸೂಲಿ, ವಿದ್ಯುತ್ ಮತ್ತು ಸೋಲಾರ್ ಬೀದಿ ದೀಪ ಅಳವಡಿಕೆ, ಕುಡಿಯುವ ನೀರಿನ ಸೌಲಭ್ಯ, ಘನತ್ಯಾಜ್ಯ ನಿರ್ವಹಣೆ , ಘನತ್ಯಾಜ್ಯ ವಾಹನಕ್ಕೆ ಮಹಿಳಾ ಚಾಲಕಿ ಹಾಗೂ ಮಹಿಳಾ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿರುತ್ತಾರೆ, ಸಾಮಾನ್ಯ ಸಭೆ, ವಾರ್ಡ್ ಸಭೆ, ಗ್ರಾಮಸಭೆ , ಮಕ್ಕಳ ಗ್ರಾಮ ಸಭೆ ಹಾಗೂ ಇತರ ಸಮಿತಿ ಸಭೆಗಳನ್ನು ನಿಯಮಿತವಾಗಿ ನಡೆಸಲಾಗಿದೆ. ವಿಶೇಷ ಚೇತನರಿಗೆ ಮತ್ತು ಪ.ಜಾತಿ ಪ.ಪಂಗಡದ ಅನುದಾನ ಸಂಪೂರ್ಣ ಬಳಕೆಯಾಗಿರುತ್ತದೆ.
ಕುಡಿಯುವ ನೀರಿನ ವಿದ್ಯುತ್ ಸ್ಥಾವರಗಳ ವಿದ್ಯುತ್ ಬಿಲ್ಲು ಶೇ 100 ಪಾವತಿ ಮಾಡಿ ಉಳಿಕೆ ಅನುದಾನವನ್ನು ಅಭಿವೃದ್ಧಿ ಕಾಮಗಾರಿಗೆ ಬಳಕೆ ಮಾಡಿಕೊಳ್ಳಲಾಗಿದೆ. ವೈಯಕ್ತಿಕ ಇಂಗು ಗುಂಡಿ ರಚನೆ, ಶಾಲೆಗಳಲ್ಲಿ ಬಾಲಕ ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ರಚನೆ, ಶಾಲೆಗೆ ಕಂಪೌಂಡು ರಚನೆ ಮಾಡಲಾಗಿದೆ.
ಸೋಲಾರ್ ಬೀದಿ ದೀಪ ಹಾಗೂ ಎಲ್.ಇ.ಡಿ ವಿದ್ಯುತ್ ಬಲ್ಬುಗಳ ಅಳವಡಿಕೆ, ಪ.ಜಾತಿ ಪ.ಪಂಗಡ ಕಾಲೊನಿಗಳಿಗೆ ದಾರಿದೀಪಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಕುಡಿಯುವ ನೀರಿನ ಶುಲ್ಕ ವಸೂಲಿಗೆ ಸರಾಗ ಸಾಫ್ಟ್ ವೇರ್ ಅಳವಡಿಸಲಾಗಿದೆ, ತೆರಿಗೆ ವಸೂಲಿಗೆ ಸ್ಕ್ಯಾನರ್ ಅಳವಡಿಕೆ ಮಾಡಲಾಗಿದೆ, ಆರೋಗ್ಯ ಅಮೃತ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ, ಅಗ್ನಿನಿರೋಧಕ ಸಾಧನವನ್ನು ಕಛೇರಿ, ಗ್ರಂಥಾಲಯ ಅಳವಡಿಸಲಾಗಿದೆ
ಅರಿವು ಕೇಂದ್ರದ ಡಿಜಿಟಲೀಕರಣ ಮತ್ತು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ.
2023-24 ನೇ ಸಾಲಿಗೆ ಪುತ್ತೂರು ಕೋಡಿಂಬಾಡಿ ಗ್ರಾಮ ಪಂಚಾಯಿತಿಯು ಜಿಲ್ಲಾ ಸಮಿತಿಯಿಂದ ಗಾಂಧೀ ಗ್ರಾಮ ಪುರಸ್ಕಾರಕ್ಕೆ ಶಿಫಾರಸ್ಸು ಗೊಂಡಿತು.
ಈ ಸಂದರ್ಭದಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಲ್ಲಿಕಾ, ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರ್, ಸದಸ್ಯರಾದ ಉಷಾ ಲಕ್ಷ್ಮಣ ಪೂಜಾರಿ, ಪುಷ್ಪಾ ಲೋಕಯ್ಯ ನಾಯ್ಕ್, ಪಂಚಾಯತ್ ಅಭಿರುದ್ದಿ ಅಧಿಕಾರಿ ವಿಫ್ರೆಡ್ ರೋದ್ರಿಗಸ್, ಸಿಬ್ಬಂದಿಗಳಾದ ಸುರೇಶ್ ಕಿನ್ನಿತ ಪಾಲಿಕೆ, ಸುರೇಶ ಉಪಸ್ಥಿತರಿದ್ದರು.