Published
1 month agoon
By
Akkare Newsಮಂಗಳೂರು :(ನ.11) ಮಂಗಳೂರು ನಗರದ ಲೇಡಿಹಿಲ್ ನ ಪೆಟ್ರೋಲ್ ಪಂಪ್ ಎದುರು ಮಾರುತಿ 800 ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲಿ ಕಾರು ಧಗಧಗಿಸಿ ಉರಿದಿದೆ. ಕೂಡಲೇ ಪೆಟ್ರೋಲ್ ಪಂಪ್ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಮಂಗಳೂರಿನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ರಸ್ತೆಯ ಅಂಚಿನಲ್ಲೇ ಇರುವ ಪೆಟ್ರೋಲ್ ಪಂಪ್ ಮುಂಭಾಗ ನಿಂತಿತ್ತು ಎಂದು ಕದ್ರಿ ಅಗ್ನಿಶಾಮಕ ಇಲಾಖೆಯವರು ತಿಳಿಸಿದ್ದಾರೆ. ಕೂಡಲೇ ಪೆಟ್ರೋಲ್ ಪಂಪ್ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.