Published
1 month agoon
By
Akkare Newsಕಂದಾಯ ಕಛೇರಿಗೆ ನುಗ್ಗಿ ನಿರೀಕ್ಷಕರ ಮೇಲೆ ಅಟ್ಟಹಾಸ ಮೆರೆದು ಪೀಠೋಪಕರಣ ಧ್ವಂಸಗೈದ ಆರೋಪಿಗಳು ಬಂಧನದ ಭೀತಿಯಲ್ಲಿ ತಲೆಮರೆಸಿಕೊಂಡಿದ್ದಾರೆ. ಈ ಮಧ್ಯೆ ಪ್ರಮುಖ ಆರೋಪಿ ಹರೀಶ್ ಶೆಟ್ಟಿ ಕಲ್ಮಲೆ ಬಂಟ್ವಾಳ ತಾಲೂಕು ಮಿನಿ ವಿಧಾನಸೌಧದ ಶಿರಸ್ತೇದಾರ್ ಕಛೇರಿಗೆ ಅಕ್ರಮ ಪ್ರವೇಶ ಮಾಡಿ ಅಧಿಕಾರಿಗೆ ನಿಂದಿಸಿ, ಬೆದರಿಕೆ ಹಾಕಿದ ಘಟನೆ ನಡೆದಿದೆ.
ವಿಟ್ಲ ಠಾಣೆಯಲ್ಲಿ ನಮ್ಮ ವಿರುದ್ಧ ಕೇಸು ದಾಖಲಿಸಲು ನೀನ್ಯಾಕೆ ಹೋಗಿದ್ದಿ, ನಿನ್ನನ್ನು ಸುಮ್ಮನೆ ಬಿಡುವುದಿಲ್ಲ. ಎಂದು ಹರೀಶ್ ಶೆಟ್ಟಿ ಕಲ್ಮಲೆ ಶಿರಸ್ತೇದಾರ್ ದಿವಾಕರ ಮುಗುಳ್ಯಗೆ ನಿಂದಿಸಿ ಧಮ್ಕಿ ಹಾಕಿರುವ ಗಂಭೀರ ಆರೋಪ ಕೇಳಿಬಂದಿದೆ.
ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ಬಂಟ್ವಾಳ ತಹಶೀಲ್ದಾರ್ ಅವರಿಗೆ ಮನವಿ ನೀಡಿದ್ದಾರೆ. ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಸರ್ಕಾರಿ ಸಿಬ್ಬಂದಿಗಳಿಗೆ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ರಕ್ಷಣೆ ಕೊಡಬೇಕು. ಪೊಲೀಸ್ ಇಲಾಖೆ ತಕ್ಷಣವೇ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ರಾಜ್ಯದಾಧ್ಯಂತ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.