ಅಭಿನಂದನೆ ಅಭಿಪ್ರಾಯ ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತರ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾನೂನು ಕಾರ್ಯಕ್ರಮಗಳು ಗ್ರಾ.ಪಂ ಚುನಾವಣೆ ಗ್ರಾಮಸಭೆ ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ತಾಜಾ ಸುದ್ದಿ ಪ್ರಕಟಣೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಕೋಡಿಂಬಾಡಿ ಗ್ರಾಮ ಪಂಚಾಯತ್ ನಲ್ಲಿ ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಸರ್ವರ ಪಾಲ್ಗೊಳ್ಳುವಿಕೆ ವಿಶೇಷ ಕಾರ್ಯಕ್ರಮ.ಅಭಿಪ್ರಾಯ ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಗ್ರಾಮಸಭೆ ಚರ್ಚೆಗಳು ಜೀವನಶೈಲಿ ತಂತ್ರಜ್ಞಾನ ತಾಜಾ ಸುದ್ದಿ ಪ್ರಕಟಣೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಪುತ್ತೂರು :ಜ 24, ಕೋಡಿಂಬಾಡಿ ಗ್ರಾಮ ಪಂಚಾಯತ್ ನಲ್ಲಿ ವಿಶೇಷ ಗ್ರಾಮ ಸಭೆಅಭಿಪ್ರಾಯ ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತರ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಲೆ - ಸಾಹಿತ್ಯ ಕಾನೂನು ಕಾರ್ಯಕ್ರಮಗಳು ಗ್ರಾ.ಪಂ ಚುನಾವಣೆ ಗ್ರಾಮಸಭೆ ಚರ್ಚೆಗಳು ಚುನಾವಣೆ ಜೀವನಶೈಲಿ ತಂತ್ರಜ್ಞಾನ ದಕ್ಷಿಣ ಕನ್ನಡ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸುದ್ದಿಗೋಷ್ಠಿ ಸ್ಥಳೀಯ
ಬಿಜೆಪಿಯವರು ತೆಂಗಿನ ಕಾಯಿ ಒಡೆದ ಮೂರು ರಸ್ತೆಯನ್ನು ಬಿಟ್ಟುಕೊಡ್ತೇವೆ ಅಭಿವೃದ್ದಿ ಮಾಡಲಿ: ಮಾಜಿ ಶಾಸಕರಿಗೆ ಸಾವಲು ಹಾಕಿದ ಶಾಸಕ ಅಶೋಕ್ ರೈಅಭಿಪ್ರಾಯ ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಕಾನೂನು ಕಾರ್ಯಕ್ರಮಗಳು ಗ್ರಾ.ಪಂ ಚುನಾವಣೆ ಗ್ರಾಮಸಭೆ ಚರ್ಚೆಗಳು ಜೀವನಶೈಲಿ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ವಿಶೇಷ ವರದಿ ಸಭೆ - ಸಮಾರಂಭ
ಕುಡಿಯುವ ನೀರಿಲ್ಲದೆ ಜನ ಬದುಕಲು ಸಾಧ್ಯವಿಲ್ಲ. ಕುಡಿಯುವ ನೀರು ಎಲ್ಲರಿಗೂ ಕೊಡಬೇಕು, ಕುಡಿಯುವ ನೀರಿಗೆ ದಾಖಲೆ ಕೇಳಬಾರದು , ಪುತ್ತೂರು ಶಾಸಕ ಅಶೋಕ್ ರೈ , ಮಾಸಿಕ ಕೆಡಿಪಿ ಸಭೆಯಲ್ಲಿ ಆಗ್ರಹ.Published
1 month agoon
By
Akkare Newsಉಪ್ಪಿನಂಗಡಿ: ಮಹಿಳೆಯೆನ್ನುವುದು ಅಬಲೆಯಲ್ಲ. ಆಕೆ ಸಬಲೆ. ಗಂಡು ಮತ್ತು ಹೆಣ್ಣು ಎಂಬುದು ಒಂದೇ ನಾಣ್ಯದ ಎರಡು ಮುಖಗಳಾಗಿದ್ದು, ಪುರುಷರಷ್ಟೇ ಆಕೆಯೂ ಸರಿಸಮಾನಳಾಗಿದ್ದಾಳೆ. ಇದನ್ನು ಮಹಿಳೆಯರು ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕಾಗಿದ್ದು, ಅವಕಾಶ ವಂಚಿತರಾಗದೇ ಇಂತಹ ವೇದಿಕೆಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಪುತ್ತೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸುಮಂಗಳ ಶೆಣೈ ಹೇಳಿದರು.
ಇಲ್ಲಿನ ಕೋಡಿಂಬಾಡಿ ಗ್ರಾ.ಪಂ.ನಲ್ಲಿ ನ.15ರಂದು ನಡೆದ ಮಹಿಳಾ ಗ್ರಾಮ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಗಂಡು- ಹೆಣ್ಣಿನ ನಡುವೆ ತಾರತಮ್ಯ ಮಾಡಬಾರದು. ಮಹಿಳೆಯರು ಮನೆಗಷ್ಟೇ ಸೀಮಿತರಾಗದೇ ಸಮಾಜದ ಮುಖ್ಯವಾಹಿನಿಗೆ ಬಂದು ಆರ್ಥಿಕವಾಗಿ, ಸಾಮಾಜಿಕವಾಗಿ, ಕೌಟುಂಬಿಕವಾಗಿ ಹಾಗೂ ರಾಜಕೀಯವಾಗಿ ಸಬಲೀಕರಣಗೊಳ್ಳಬೇಕಿದೆ. ಸಂಘ- ಸಂಸ್ಥೆಗಳಲ್ಲಿ ಗುರುತಿಸಿಕೊಳ್ಳಬೇಕಿದೆ. ಪುರುಷರನ್ನು ವಿರೋಧಿಸದೇ, ಪುರುಷ ಪ್ರಧಾನ ವ್ಯವಸ್ಥೆಯನ್ನು ವಿರೋಧಿಸಬೇಕಿದೆ ಎಂದರಲ್ಲದೆ, ಹೆಣ್ಣಿಗೆ ಗೌರವ ಕೊಟ್ಟು ಮಹಿಳಾ ದಿನವನ್ನು ಆಚರಿಸಿದಾಗ ಮಾತ್ರ ಅದಕ್ಕೊಂದು ಅರ್ಥ ಬರಲು ಸಾಧ್ಯ. ಮಹಿಳೆಯರು ತಮಗಾಗಿರುವ ಅನ್ಯಾಯ, ಸಮಸ್ಯೆಯನ್ನು ಗ್ರಾ.ಪಂ.ಗೆ ತಿಳಿಸಿದಾಗ ಅದಕ್ಕೆ ಪರಿಹಾರ ಕಂಡು ಕೊಳ್ಳಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೋಡಿಂಬಾಡಿ ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಮಾತನಾಡಿ, ಮಹಿಳೆಯರಿಗೆ ಇಂದು ಎಲ್ಲಾ ಕಡೆ ಅವಕಾಶಗಳಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಉತ್ತಮ ಕೆಲಸಗಳ ಮೂಲಕ ಸಮಾಜ ನಮ್ಮನ್ನು ಗುರುತಿಸಿ, ಗೌರವಿಸುವಂತಾಗಬೇಕು ಎಂದರು.ಕೋಡಿಂಬಾಡಿ ಗ್ರಾ.ಪಂ.ನ ಪ್ರಭಾರ ಪಿಡಿಒ ವಿಲೈಡ್ ಲಾರೆನ್ಸ್ ರೊಡ್ರಿಗಸ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳಾ ಗ್ರಾಮ ಸಭೆಯ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಿತು.ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಸದಸ್ಯರಾದ ರಾಮಣ್ಣ ಗೌಡ, ಜಗನ್ನಾಥ ಶೆಟ್ಟಿ, ಮೋಹಿನಿ, ಗೀತಾ, ಉಷಾ, ಪೂರ್ಣಿಮಾ, ಪುತ್ತೂರು ಶಿಶು ಅಭಿವೃದ್ಧಿ ಯೋಜನೆಯ ಮೇಲ್ವಿಚಾರಕಿ ಹರಿಣಾಕ್ಷಿ ಬಿ., ಎನ್‌ಆರ್‌ಎಲ್‌ಎಂನ ಒಕ್ಕೂಟ ಅಧ್ಯಕ್ಷೆ ಚಿತ್ರಾ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಮೀನಾಕ್ಷಿ, ವೀಣಾ, ಗೌರಿ, ಜಯಂತಿ, ಪಿಎಚ್‌ಸಿಒನ ಸಿ.ಎಂ. ಶೀಲಾ, ಆಶಾ ಕಾರ್ಯಕರ್ತೆಯರಾದ ಪವಿತ್ರ ಎಂ., ಸುಪ್ರಿತಾ, ಗ್ರಂಥಾಲಯ ಮೆಲ್ಸಿಚಾರಕಿ ಕುಸುಮ,ಸ್ರಿಶಕ್ತಿ ಹೊಕ್ಕೂಟದ ಪದ್ಮಲತಾ ಶೆಟ್ಟಿ, ಸಂಧ್ಯಾ ಕೆ., ಕವಿತಾ ಬಿ., ಸ್ಫೂರ್ತಿ ಆರ್. ರೈ, ವೀಣಾ ಬಿ., ತುಳಸಿ ಕೆ., ಶಾರದಾ, ಅನಿತಾ, ಶಶಿಕಲಾ, ಉಷಾ ಕುಮಾರಿ, ಸುಂದರಿ ಪಿ., ಭವ್ಯ ವಿ. ಶೆಟ್ಟಿ, ವೀಣಾ ಎಂ., ಪ್ರಿಯಾ ರಮೇಶ್, ಪ್ರಸನ್ನ ಕುಮಾರಿ ಕೆ ಮತ್ತಿತರರು ಉಪಸ್ಥಿರಿದ್ದರು, ಪಂಚಾಯತ್ ಸಿಬ್ಬಂದಿಗಳಾದ ಸುರೇಶ. ಕಿನ್ನಿತಾಪಳಿಕೆ , ರೀತಾ, ಕಾವ್ಯ ಕಾರ್ಯಕ್ರಮ ನಿರ್ವಹಿಸಿದರು.