Published
1 month agoon
By
Akkare Newsಪುತ್ತೂರು: ಏಳು ತಿಂಗಳ ಹಿಂದೆ ನಾಪತ್ತೆಯಾಗಿರುವ ಕೆದಂಬಾಡಿ ಗ್ರಾಮದ ಬಾರಿಕೆ ನಿವಾಸಿ ಸಂಕಪ್ಪ ಪೂಜಾರಿ ಅವರ ಪುತ್ರ ದಿವಾಕರ (37) ಇನ್ನೂ ಪತ್ತೆಯಾಗಿಲ್ಲ.
ಅವಿವಾಹಿತರಾಗಿರುವ ಅವರು ಕೂಲಿ ಕಾರ್ಮಿಕರಾಗಿದ್ದು ಎ.27ರಂದು ಬೆಳಗ್ಗೆ 6ಕ್ಕೆ ಮನೆಯಿಂದ ಹೊರ ಹೋಗಿದ್ದರು. ಕಾಣೆಯಾದ ಸಂದರ್ಭದಲ್ಲಿ ಕರೆ ಮಾಡಿದ್ದ ಅವರು, ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದು ತಿಳಿಸಿದ್ದು ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಈ ನಡುವೆ ಸಂಪ್ಯ ಪೊಲೀಸರ 15 ಮಂದಿಯ ತಂಡ ಕಾಡಿನಲ್ಲಿ ಹುಡುಕಾಟವನ್ನೂ ನಡೆಸಿದ್ದರು.
ದಿವಾಕರ ಅವರ ಗುರುತು ಪತ್ತೆಯಾದಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ನಿರೀಕ್ಷಕರು, ಜಿಲ್ಲಾ ಕಂಟ್ರೋಲ್ ರೂಂಗೆ ಮಾಹಿತಿ ನೀಡುವಂತೆ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕಟನೆ ತಿಳಿಸಿದೆ.